ಅಮಿತ್ ಶಾ ಬಂದು ಮನೆಯಲ್ಲಿ 2 ಗಂಟೆ ಕೂತು ಜೀವ ತೆಗೆದ್ರು : 2 ಕಡೆ ಸ್ಪರ್ಧೆ ವಿಚಾರಕ್ಕೆ ಸೋಮಣ್ಣ ಬೇಸರ

ತುಮಕೂರು: ಬಿಜೆಪಿ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಒಂದು ಕಾಲನ್ನು ಪಕ್ಷದಿಂದ ಹೊರಗಿಟ್ಟಿರುವ ಮಾಜಿ ಸಚಿವ ವಿ.ಸೋಮಣ್ಣ ಅವರು, ಗೃಹ ಸಚಿವ ಅಮಿತ್ ಶಾ ಬಗ್ಗೆ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಂದರ್ಭದಲ್ಲಿ ವಿ ಸೋಮಣ್ಣ ಅವರು ಸಿದ್ದಲಿಂಗ ಸ್ವಾಮೀಜಿ ಬಳಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಒತ್ತಡ ಸೃಷ್ಟಿಯಾಗಿದ್ದಕ್ಕೆ ಸೋಮಣ್ಣ ದುಃಖ ಹಂಚಿಕೊಂಡರು. “ಇಲ್ಲಿ ಬಿಟ್ಟು ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಿದ್ದೇ ನನ್ನ ದೊಡ್ಡ ಮಹಾ ಅಪರಾಧ. ಅಮಿತ್ ಶಾ ಬಂದು ಮನೆಯಲ್ಲಿ ಕುಳಿತುಕೊಂಡು ರಾಜಕೀಯವಾಗಿ ಜೀವ ತೆಗೆದರು. ಆಗುವುದಿಲ್ಲ ಎಂದು ಹೇಳಿದ್ದೆ ಎಂದು ಚುನಾವಣೆಯಲ್ಲಿ ಎರಡು ಕಡೆ ನಿಲ್ಲುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒತ್ತಾಯಿಸಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನಂತರ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ಕರೆಸಿಕೊಂಡು ನೀನು ಎರಡೂ ಕಡೆ ನಿಲ್ಲು ಎಂದು ಹೇಳಿದ್ದರು ಎಂದು ಸ್ವಾಮೀಜಿಗಳ ಮುಂದೆ ಹೇಳಿದ್ದಾರೆ. ಆದರೆ ಅವರು ಸುದ್ದಿವಾಹಿನಿಗಳ ಕ್ಯಾಮರಾ ಕಂಡೊಡನೆ ಮಾತು ಬದಲಿಸಿದರು.
ಸೋಮಣ್ಣ ತುಮಕೂರಿನ ಕ್ಯಾತಸಂದ್ರ ಬಳಿಯಿರುವ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶಿವಸಿದ್ದೇಶ್ವರ ಸ್ವಾಮೀಜಿಗಳ ದರ್ಶನ ಪಡೆದರು. ಈ ವೇಳೆ ಪತ್ನಿ ಶೈಲಜಾ ಸೋಮಣ್ಣ ಹಾಗೂ ಪುತ್ರ ಅರುಣ ಸೋಮಣ್ಣ ಇದ್ದರು.

ಪ್ರಮುಖ ಸುದ್ದಿ :-   ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಗುರುಭವನ ಲೋಕಾರ್ಪಣೆ: ಪರಿಶೀಲನೆ
ಸ್ವಾಮೀಜಿ ಆಶೀರ್ವಾದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸೋಮಣ್ಣ, ಡಿಸೆಂಬರ್ 6 ರಂದು ನಡೆಯಲಿರುವ ಗುರುಭವನ ಲೋಕಾರ್ಪಣೆ ಸಮಾರಂಭ ಪರಿಶೀಲನೆ ನಡೆಸಲು ಬಂದಿರುವುದಾಗಿ ತಿಳಿಸಿದರು. “ಸಿದ್ದಗಂಗಾ ಮಠಕ್ಕೆ ಬರುವುದು ಭೇಟಿಯಲ್ಲ. ನಾನು ಶ್ರೀಮಠದ ಒಬ್ಬ ಭಕ್ತ. ಮಠದ ಜತೆಗೆ 44 ವರ್ಷಗಳ ಸಂಬಂಧ ನನ್ನದು. ನಮ್ಮ ಕುಟುಂಬ ನನಗೆ ಮಾಹಿತಿ ಗೊತ್ತಿಲ್ಲದೆ ಗುರುಭವನ ನಿರ್ಮಿಸಿದೆ. ನಾನು ಈ ಗುರುಭವನವನ್ನು ನೋಡುತ್ತಿರುವುದು ಇದು ಮೊದಲನೇ ಸಲ” ಎಂದು ಹೇಳಿದರು.

ಡಿಸೆಂಬರ್‌  6 ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ಇಬ್ಬರು ಸಚಿವರು ಇರುತ್ತಾರೆ. ರಾಜಣ್ಣ, ಪರಮೇಶ್ವರ್ ಇರುತ್ತಾರೆ. ಅದಕ್ಕೆ ರಾಜಕೀಯ ಮಾಡೋವಷ್ಟು ಕೀಳುಮಟ್ಟ ನಾನು ಮಾಡಲ್ಲ. ಈ ಕಾರ್ಯಕ್ರಮಕ್ಕೆ ರಾಜಕೀಯ ಲೇಪನ ಬೇಡ ಎಂದು ತಿಳಿಸಿದರು.

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement