ಚಾಕು ಇರಿತದ ಪ್ರಕರಣ: ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡ ಸಲ್ಮಾನ್‌ ರಶ್ದಿ, ಒಂದು ಕೈ ನಿಷ್ಕ್ರಿಯ

ಆಗಸ್ಟ್‌ನಲ್ಲಿ ಪಶ್ಚಿಮ ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯಿಕ ಸಮಾರಂಭದಲ್ಲಿ ವೇದಿಕೆಯ ಮೇಲೆ ಸ್ಲಮಾನ್‌ ರಶ್ದಿ ಮೇಲೆ ನಡೆದ ದಾಳಿಯ ನಂತರ ರಶ್ದಿ ಅವರ ಒಂದು ಕಣ್ಣಿನ ಮತ್ತು ಒಂದು ಕೈಯ ಬಳಸುವುದು ಕಷ್ಟಸಾಧ್ಯವಾಗಿದೆ ಎಂದು ಅವರ ಏಜೆಂಟ್ ಹೇಳಿದ್ದಾರೆ.
ಸಾಲ್ ಬೆಲ್ಲೊ ಮತ್ತು ರಾಬರ್ಟೊ ಬೊಲಾನೊ ಅವರಂತಹ ಸಾಹಿತ್ಯಿಕ ದಿಗ್ಗಜರನ್ನು ಪ್ರತಿನಿಧಿಸುವ ಆಂಡ್ರ್ಯೂ ವೈಲಿ ಅವರು ಸ್ಪ್ಯಾನಿಷ್ ಪತ್ರಿಕೆ ಎಲ್ ಪೈಸ್‌ಗೆ ನೀಡಿದ ಸಂದರ್ಶನದಲ್ಲಿ “ಕ್ರೂರ” ದಾಳಿಯಲ್ಲಿ ರಶ್ದಿ ಅನುಭವಿಸಿದ ಗಾಯಗಳ ವ್ಯಾಪ್ತಿಯನ್ನು ವಿವರಿಸಿದ್ದಾರೆ.

ಲೇಖಕರ ಗಾಯಗಳನ್ನು “ಆಳವಾದ ಗಾಯ” ಎಂದು ವಿವರಿಸಿದ ಅವರು ಒಂದು ಕಣ್ಣಿನ ದೃಷ್ಟಿಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ. “ಅವನ ಕುತ್ತಿಗೆಯಲ್ಲಿ ಮೂರು ಗಂಭೀರವಾದ ಗಾಯಗಳಿದ್ದವು. ಅವರ ತೋಳಿನ ನರಗಳು ಕತ್ತರಿಸಲ್ಪಟ್ಟ ಕಾರಣ ಒಂದು ಕೈ ನಿಷ್ಕ್ರಿಯವಾಗಿದೆ. ಮತ್ತು ಅವರ ಎದೆ ಭಾಗದಲ್ಲಿ ಸುಮಾರು 15 ಗಾಯಗಳಿವೆ ಎಂದು ಅವರು ಹೇಳಿದ್ದಾರೆ.
24 ವರ್ಷದ ನ್ಯೂಜೆರ್ಸಿಯ ವ್ಯಕ್ತಿಯೊಬ್ಬರು ರಶ್ದಿ ಅವರ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಇರಿದಿದ್ದಾರೆ ಎಂದು ಪೊಲೀಸರು ಹೇಳಿದ್ದು, 75 ವರ್ಷದ “ದಿ ಸೈಟಾನಿಕ್ ವರ್ಸಸ್” ಲೇಖಕ ರಶ್ದಿ ಅವರು ಇನ್ನೂ ಎರಡು ತಿಂಗಳಿಗಿಂತ ಹೆಚ್ಚು ಆಸ್ಪತ್ರೆಯಲ್ಲಿರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ದಾಳಿಯಲ್ಲಿ ತೀವ್ರವಾದ ಗಾಯಗಳ ನಂತರ ರಶ್ದಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement