ನದಿಗೆ ಬಿದ್ದ ಕುದುರೆ ರಕ್ಷಿಸಲು ಹೋಗಿ ಕುದುರೆ ಸಹಿತ ನೀರು ಪಾಲಾದ ಇಬ್ಬರು ಯುವಕರು

ಹೈದರಾಬಾದ್: ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಕಿಸ್ಮತ್‌ಪುರದಲ್ಲಿನ ತೆಲಂಗಾಣ ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ 19 ವರ್ಷದ ಕುದುರೆ ತರಬೇತುದಾರ ಅಶು ಸಿಂಗ್ ಮತ್ತು ಅವರ ಸಹೋದ್ಯೋಗಿ ಮೊಹಮ್ಮದ್ ಸೈಫ್ (20) ಅಕಾಡೆಮಿ ಕುದುರೆಯನ್ನು ರಕ್ಷಿಸಲು ಪ್ರಯತ್ನಿಸುವ ವೇಳೆಗ ನೀರು ಪಾಲಾಗಿದ್ದಾರೆ. ಬುಧವಾರ ತಡರಾತ್ರಿ ಹರ್ಕ್ಯುಲಸ್ ಎಂಬ ಕುದುರೆ ಈಸಾ ನದಿಗೆ ಕುದುರೆ ಜಾರಿ ಬಿದ್ದಿತ್ತು.
ಪೊಲೀಸರ ಪ್ರಕಾರ, ಅಕಾಡೆಮಿ ಮಾಲೀಕ ಮೊಹಮ್ಮದ್ ಅಜಮ್ ಕುದುರೆ ಸವಾರಿ ತರಬೇತಿಯಲ್ಲಿ ತೊಡಗಿಕೊಂಡಿದ್ದಾರೆ. ಒಂಬತ್ತು ವರ್ಷದ ಹರ್ಕ್ಯುಲಸ್‌ ಹೆಸರಿನ ಕುದುರೆಯು ಮೊದಲು ನೀರಿಗೆ ಓಡಿಹೋಗಿ ಸಿಲುಕಿಕೊಂಡಿತು ಮತ್ತು ಆಶು ಸಿಂಗ್‌ ಕುದುರೆ ರಕ್ಷಿಸಲು ಡೈವ್ ಮಾಡಿದಾಗ ಕೆಸರಿನಲ್ಲಿ ಸಿಲುಕಿಕೊಂಡ ಎಂದು ಪ್ರತ್ಯಕ್ಷದರ್ಶಿ ಆಸಿಫ್ ಪೊಲೀಸರಿಗೆ ತಿಳಿಸಿದ್ದಾರೆ. ಮಾಲೀಕನ ಸಹೋದರ ಸೈಫ್ ಕೂಡ ಇದೇ ರೀತಿಯ ಪ್ರಯತ್ನಿಸಲು ಹೋಗಿ ಕೆಸರಿನಲ್ಲಿ ಸಿಲುಕಿಕೊಂಡಿದ್ದಾನೆ, ಇಬ್ಬರಿಗೂ ಈಜು ಗೊತ್ತಿರಲಿಲ್ಲ. ಹೀಗಾಗಿ ಇಬ್ಬರೂ ನೀರಿನಲ್ಲಿ ಮುಳುಗು ಮೃತಪಟ್ಟಿದ್ದಾರೆ. ತಜ್ಞ ಈಜುಗಾರರನ್ನು ಕರೆಸಿದ ಪೊಲೀಸರು ಮೃತದೇಹಗಳನ್ನು ಹೊರತೆಗೆದಿದ್ದಾರೆ. ರಾಜೇಂದ್ರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆ ಕುರಿತು ಮಾಲೀಕ ಹಾಗೂ ಇತರರಿಂದ ವಿವರ ಸಂಗ್ರಹಿಸುತ್ತಿದ್ದೇವೆ ಎಂದು ಎಸ್‌ಐ ಶ್ವೇತಾ ಬಸಾನಿ ತಿಳಿಸಿದ್ದಾರೆ. ಅವರು ಅಕಾಡೆಮಿಗೆ ಅನುಮತಿ ಇದೆಯೇ ಇಲ್ಲವೇ ಎಂಭುದನ್ನು ಸಹ ಪರಿಶೀಲಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement