ಕಾನೂನು ಬಾಹಿರ ವಿವಾಹ : ಇಮ್ರಾನ್‌ ಖಾನ್‌, ಪತ್ನಿ ಬುಶ್ರಾಗೆ 7 ವರ್ಷ ಶಿಕ್ಷೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಖಾನ್ ಅವರಿಗೆ 2018 ರ ವಿವಾಹವು ಇಸ್ಲಾಂ ಕಾನೂನನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿದ ನ್ಯಾಯಾಲಯವು ಶನಿವಾರ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ ಎಂದು ಅವರ ಪಕ್ಷ ಹೇಳಿದೆ.
ಇದು ಮಾಜಿ ಪ್ರಧಾನಿ ವಿರುದ್ಧದ ಮೂರನೇ ಪ್ರತಿಕೂಲ ತೀರ್ಪು ಆಗಿದೆ.
ಜೈಲಿನಲ್ಲಿರುವ ಇಮ್ರಾನ್ ಖಾನ್ (71) ಇತ್ತೀಚಿನ ದಿನಗಳಲ್ಲಿ ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 10 ವರ್ಷಗಳು ಮತ್ತು ಅಕ್ರಮವಾಗಿ ಸರ್ಕಾರಿ ಉಡುಗೊರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅವರ ಪತ್ನಿಯೊಂದಿಗೆ 14 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ. ಈಗ ‘ಮುಸ್ಲಿಂ ಅಲ್ಲದ ವಿವಾಹ’ದ ಕಾರಣಕ್ಕಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಪಾಕಿಸ್ತಾನದ ನ್ಯಾಯಾಲಯ ತಲಾ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮುಸ್ಲಿಂ ಸಂಪ್ರದಾಯದಂತೆ, ಎರಡು ಮದುವೆಗಳ ನಡುವಿನ ಕಡ್ಡಾಯ ಸಮಯ ಪಾಲನೆ ಅಥವಾ ಇದ್ದತ್ ಅನ್ನು ಬುಶ್ರಾ ಬೀಬಿ ಉಲ್ಲಂಘಿಸಿದ್ದಾರೆ ಎಂದು ಅವರ ಮೊದಲ ಪತಿ ಖವರ್ ಮನೇಕಾ ಪ್ರಕರಣ ದಾಖಲಿಸಿದ್ದರು. ಇಮ್ರಾನ್‌ ಖಾನ್‌ ಮೊದಲ ಬಾರಿಗೆ ಪ್ರಧಾನಿಯಾಗುವ ಏಳು ತಿಂಗಳ ಮೊದಲು ಜನವರಿ 2018 ರಲ್ಲಿ ರಹಸ್ಯ ಸಮಾರಂಭದಲ್ಲಿ ಬುಶ್ರಾ ಖಾನ್‌ ಜೊತೆ ತಮ್ಮ ವಿವಾಹ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅವಧಿ ಪೂರ್ಣಗೊಳ್ಳುವ ಮೊದಲೇ ಅವರು ವಿವಾಹವಾಗಿದ್ದಾರೆ ಎಂಬ ಬಗ್ಗೆ ವಿವಾದವಿತ್ತು. ಈಗ ಏಳು ವರ್ಷ ಶಿಕ್ಷೆ ವಿಧಿಸಿರುವ ಹಿರಿಯ ಸಿವಿಲ್ ನ್ಯಾಯಾಧೀಶರಾದ ಖುದ್ರತ್‌ಉಲ್ಲಾ ಅವರು, ದಂಪತಿಗೆ ತಲಾ ₹5 ಲಕ್ಷ ದಂಡವನ್ನೂ ವಿಧಿಸಿದ್ದಾರೆ’ ಎಂದು ‘ಜಿಯೋ ನ್ಯೂಸ್ ವರದಿ ಮಾಡಿದೆ.
ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಜೈಲಿನಲ್ಲಿದ್ದಾರೆ, ಆದರೆ ಅವರ ಪತ್ನಿ ಇಸ್ಲಾಮಾಬಾದ್‌ನಲ್ಲಿರುವ ಅವರ ಬೆಟ್ಟದ ಮ್ಯಾನ್ಷನ್‌ನಲ್ಲಿ ಶಿಕ್ಷೆಯನ್ನು ಅನುಭವಿಸಲು ಅನುಮತಿಸಲಾಗಿದೆ.

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement