ಕುಮಟಾ :ತೈಲಬೆಲೆ ಏರಿಕೆಯಿಂದ ಜನಸಾಮಾನ್ಯರು ಕಷ್ಟ ಎದುರಿಸುತ್ತಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಲು ತಕ್ಷಣವೇ ಕ್ರಮಕೈಗೊಳ್ಳಬೇಕು ಮಾಡಬೇಕು ಎಂದು ಒತ್ತಾಯಿಸಿ ಕುಮಟಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಮಾಸ್ತಿಕಟ್ಟೆಯ ರಾಷ್ಟ್ರೀಯ ಹೆದ್ದಾರಿ 66 ಹತ್ತಿರ ಪ್ರತಿಭಟನೆ ನಡೆಸಲಾಯಿತು.
ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ತೈಲ ಬೆಲೆ ಏರಿಕೆ ಹೆಚ್ಚಳಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಕೋವಿಡ್ ಸಂಕಷ್ಟದಲ್ಲಿ ತೈಲ ಬೆಲೆ ಏರಿಕೆಯಿಂದ ಸರಕುಗಳ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಬಡವರ ಬದುಕು ಇನ್ನಷ್ಟು ಕಷ್ಟವಾಗಿದೆ. ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಗ್ರಾಮೀಣ ಭಾಗದವರು ಸಾಮಾನಿಗೆ ಕೊಡುವ ಬೆಲೆಗಿಂತ ನಗರಕ್ಕೆ ಬರುವ ಸಲುವಾಗಿ ಪೆಟ್ರೋಲ್ ಮೇಲೆ ಮಾಡುವ ವೆಚ್ಚವೇ ಹೆಚ್ಚಾಗುತ್ತಿದೆ ಎಂದರು.
ಕಾಂಗ್ರೆಸ್ ಆಡಳಿತದಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಜನಪರ ಯೋಜನೆ ತಂದು ಬಡವರಿಗೆ ಅನುಕೂಲ ಮಾಡಿದ್ದರು. ಈಗ ಪೆಟ್ರೋಲ್ ಬೆಲೆ ನೂರರ ಗಡಿದಾಟಿದ್ದರೂ ಜನರ ಸಂಕಷ್ಟ ಕೇಳುವವರಿಲ್ಲದಂತಾಗಿದೆ ಎಂದು ಸರ್ಕಾರದ ಕಾರ್ಯ ವೈಖರಿ ಖಂಡಿಸಿದರು.
ಕಾಂಗ್ರೆಸ್ ಕಾರ್ಯ ಕರ್ತರು ವಿವಿಧ ಸ್ಲೋಗನ್ ಹಿಡಿದುಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಟೀಕಾ ಪ್ರಹಾರ ನಡೆಸಿದರು.ೀ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ. ಎಲ್. ನಾಯ್ಕ್, ಪ್ರಧಾನಿ ಮೋದಿಯವರ ಅಚ್ಛೆ ದಿನ್ ಎಂದು ಹೇಳುತ್ತ ಪೆಟ್ರೋಲ್ ದರ ಏರಿಕೆ ಮಾಡಿದ್ದಾರೆ. ಇದುವೇ ಅವರ ಸಾಧನೆ ಎಂದು ಕಟುವಾಗಿ ಟೀಕಿಸಿದರು.
ಪ್ರತಿಭಟಿಯಲ್ಲಿ ರವಿಕುಮಾರ ಶೆಟ್ಟಿ. ಸುರೇಖಾ ವಾರೇಕರ್. ಅಶೋಕ ಗೌಡ. ಮುಜಾಫರ್ ಸಾಬ್. ರತ್ನಾಕರ ನಾಯ್ಕ್ ಮತ್ತಿತರ ರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ