ವಿಚ್ಛೇದನದ ಬಗ್ಗೆ ವಿಡಿಯೊದಲ್ಲಿ ಅಮೀರ್ ಖಾನ್ -ಕಿರಣ್ ರಾವ್ ಮಾತು.. ಈಗ ಟ್ರೆಂಡಿಂಗ್

ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು 15 ವರ್ಷಗಳ ವಿವಾಹದ ನಂತರ ತಮ್ಮ ದಾಂಪತ್ಯದ ವಿಚ್ಛೇದನವನ್ನು ಜುಲೈ 3ರಂದು (ಶನಿವಾರ) ಜಂಟಿ ಹೇಳಿಕೆಯಲ್ಲಿ ಪ್ರಕಟಿಸಿದ್ದಾರೆ.
ಅವರು ಭಾನುವಾರ (ಜುಲೈ 4) ಒಟ್ಟಿಗೆ ವೀಡಿಯೊ ಸಂದೇಶವನ್ನು ತಮ್ಮ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಕೈಕೈ ಹಿಡಿದುಕೊಂಡಿದ್ದಾರೆ. ಮಾಜಿ ದಂಪತಿ ತಾವು ಇನ್ನೂ ಒಂದೇ ಕುಟುಂಬದ ಭಾಗವಾಗಿದ್ದೇವೆ ಎಂದು ಎಲ್ಲರಿಗೂ ಭರವಸೆ ನೀಡಿದರು. ಅವರ ಸಂಬಂಧ ಬದಲಾದರೂ, ಅವರು ತಾವು ಒಬ್ಬರಿಗೊಬ್ಬರು ಇರುತ್ತೇವೆ ಎಂದು ಅವರು ಹೇಳಿದರು.

ವಿಡಿಯೋದಲ್ಲಿ, ಶನಿವಾರ ವಿಚ್ಛೇದನವನ್ನು ಘೋಷಿಸಿದ ಅಮೀರ್ ಖಾನ್ ಮತ್ತು ಕಿರಣ್ ರಾವ್, ಕೈ ಹಿಡಿದುಕೊಂಡು ಪರಸ್ಪರ ಕುಳಿತುಕೊಳ್ಳುತ್ತಾರೆ. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಅವರು, “ತೋಹ್ ಆಪ್ ಲೋಗೊನ್ ಕೊ ದುಖ್ ಭಿ ಹುವಾ ಹೊಗಾ, ಅಚ್ಚಾ ನಹಿ ಲಗಾ ಹೊಗಾ, ಶಾಕ್ ಲಗಾ ಹೊಗಾ. ಹಮ್ ಬಾಸ್ ಇತ್ನಾ ಆಪ್ಕೊ ಕೆಹ್ನಾ ಚಾಹ್ತೆ ಹೈ ಕಿ ಹಮ್ ಲೋಗ್ ದೋನೊ ಬಹುತ್‌ ಖುಷ್ ಹೈ ಔರ್ ಹಮ್ ಏಕ್ ಹೈ ಪರಿವಾರ್ ಹೈ. ಹುಮಾರೆ ರಿಶ್ತೆ ಮೇ ಚೇಂಜ್ ಆಯಾ ಹೈ. ಲೆಕಿನ್ ಹಮ್ ಲೋಗ್ ಎಕ್ ದೂಸ್ರೆ ಕೆ ಸಾಥ್ ಹೈ, ತೋಹ್ ಆಪ್ ಲೋಗ್‌ ಐಸಾ ಕಬಿ ಮತ್ ಸೋಚಿಯೆಗಾ (ನೀವೆಲ್ಲರೂ ದುಃಖಿತರಾಗಿರಬೇಕು ಮತ್ತು ಸುದ್ದಿಯಿಂದ ಆಘಾತಕ್ಕೊಳಗಾಗಬೇಕು. ನಾವು ತುಂಬಾ ಸಂತೋಷವಾಗಿದ್ದೇವೆ ಮತ್ತು ನಾವು ಒಂದು ಕುಟುಂಬದ ಭಾಗವಾಗಿದ್ದೇವೆ ಎಂದು ಹೇಳಲು ನಾವು ಬಯಸುತ್ತೇವೆ. ಸಂಬಂಧ ಬದಲಾಗಿದೆ. ಆದರೆ ನಾವು ಇನ್ನೂ ಒಬ್ಬರಿಗೊಬ್ಬರು ಇದ್ದೇವೆ, ಆದ್ದರಿಂದ ದಯವಿಟ್ಟು ಬೇರೆ ರೀತಿಯಲ್ಲಿ ಯೋಚಿಸಬೇಡಿ) ಎಂದು ಹೇಳಿದ್ದಾರೆ.
ಅಮೀರ್ ಖಾನ್ ಮತ್ತು ಕಿರಣ್ ರಾವ್ ಅವರು ಜುಲೈ 3 ರಂದು ಜಂಟಿ ಹೇಳಿಕೆ ನೀಡಿದ್ದರು. ಅವರ ವಿಚ್ಛೇದನ ಅಂತ್ಯವಲ್ಲ, ಆದರೆ ಹೊಸ ಪ್ರಯಾಣದ ಪ್ರಾರಂಭ ಎಂದು ವಿವರಿಸಿದ ಅಮೀರ್ ಮತ್ತು ಕಿರಣ್ ಅವರು ತಮ್ಮ ಮಗ ಆಜಾದ್‌ಗೆ ಸಮರ್ಪಕ ಪೋಷಕರಾಗಿ ಉಳಿಯುತ್ತೇವೆ ಎಂದು ಹೇಳಿದರು.
ಅಮೀರ್ ಖಾನ್ ಲಗಾನ್ ಚಿತ್ರೀಕರಣದಲ್ಲಿದ್ದಾಗ ಕಿರಣ್ ರಾವ್ ಅವರನ್ನು ಭೇಟಿಯಾದರು. ಅವರು ಡಿಸೆಂಬರ್ 28, 2005 ರಂದು ವಿವಾಹವಾದರು. ಕಿರಣ್ ಮದುವೆಯಾಗುವ ಮೊದಲು ಅಮೀರ್ ಖಾನ್ 1 ರೀನಾ ದತ್ತಾ ಅವರನ್ನು ಮದುವೆಯಾಗಿದ್ದರು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement