ಕರಗಿದ ಇಂಟರ್ನೆಟ್‌…! ಉಕ್ರೇನ್‌ನ ಎಲ್ವಿವ್ ರೈಲು ನಿಲ್ದಾಣದ ಮುಂದೆ ಪಿಯಾನೋ ನುಡಿಸುತ್ತಿರುವ ಮಹಿಳೆ ವೀಡಿಯೊ ವೈರಲ್‌-ಇದು ಆತ್ಮ-ಕಲಕುವಿಕೆ ಎಂದ ನೆಟ್ಟಿಗರು

ಯುದ್ಧವು ಬಹಳಷ್ಟು ಭಾವನೆಗಳನ್ನು ಹೊರಹಾಕುತ್ತದೆ. ದುಃಖ, ಕೋಪ ಮತ್ತು ಹತಾಶೆ. ಹೆಚ್ಚಾಗಿ, ದುಃಖ. ಯುದ್ಧ ಪೀಡಿತ ಉಕ್ರೇನ್‌ನಲ್ಲಿಯೂ ಇದೇ ಪರಿಸ್ಥಿತಿಯಿದೆ. ಅನೇಕರು ತಾವು ಬೆಳೆದ ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡುತ್ತಿದ್ದಾರೆ. ರಷ್ಯಾದ ಹಠಾತ್‌ ದಾಳಿಯಿಂದಾಗಿ ಅನೇಕರು ಎಲ್ಲಿಯೂ ಹೋಗಲು ಸಾಧ್ಯವಾಗದೆ ಇದ್ದಲ್ಲಿಯೇ ಬಂಧಿತರಾಗಿದ್ದಾರೆ. ಹತಾಶೆ, ಭಯ, ಾತಂಕ ಹಾಗೂ ದುಃಖದಿಂದ ಮಾನಸಿಕವಾಗಿ ಜರ್ಜರಿತರಾಗಿದ್ದಾರೆ. ಯುದ್ಧದಿಂದ ಉಕ್ರೇನ್‌ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿರುವಾಗಲೇ ಹತಾಶೆಯ ಮಧ್ಯೆಯೇ ಕೆಲವು ಬಲವಾದ ಭಾವನೆಗಳನ್ನು ಮೀರಿದ ಒಂದು ವೀಡಿಯೋ ವೈರಲ್‌ ಆಗಿದೆ.

ವೈರಲ್ ವೀಡಿಯೊದಲ್ಲಿ, ಎಲ್ವಿವ್ ಎಂಬ ನಿಲ್ದಾಣದ ಹೊರಗೆ ಲೂಯಸ್ ಆರ್ಮ್‌ಸ್ಟ್ರಾಂಗ್ ಅವರ ‘ವಾಟ್ ಎ ವಂಡರ್‌ಫುಲ್ ವರ್ಲ್ಡ್’ ಎಂಬ ಹಾಡನ್ನು ಮಹಿಳೆಯೊಬ್ಬರು ಪಿಯಾನೋದಲ್ಲಿ ನುಡಿಸುತ್ತಿರುವುದು ಕಂಡುಬಂದಿದೆ, ಜನರು ಪ್ಯಾಕ್ ಮಾಡಿದ ಚೀಲಗಳೊಂದಿಗೆ ಪಲಾಯನ ಮಾಡಲು ಜನರೆಲ್ಲ ಈ ಮಹಿಳೆಯ ಹಿಂದೆ ನಿಂತಿದ್ದಾರೆ ಅಥವಾ ದುಗುಡದಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅನೇಕರು ಪೋಲೆಂಡ್‌ಗೆ ರೈಲುಗಳನ್ನು ಹತ್ತಲು ಪಶ್ಚಿಮ ಉಕ್ರೇನ್‌ನ ಎಲ್ವಿವ್ ರೈಲು ನಿಲ್ದಾಣದ ಭಯದ ಮಧ್ಯೆ ಇದ್ದಾರೆ. ಆದರೆ ಈ ಮಹಿಳೆ ಮಾತ್ರ ಇದ್ಯಾವುದರ ಪರಿವೆಯಲ್ಲದೆ ತನ್ನೆಲ್ಲ ಭಯ, ಆತಂಕ, ಹತಾಶೆ ಹಾಗೂ ನೋವನ್ನು ಈ ಪಿಯಾನೊವನ್ನು ಅತ್ಯಂತ ಶಾಂತವಾಗಿ ನುಡಿಸುವ ಮೂಲಕ ಮರೆಯುತ್ತಿದ್ದಾರೆ. ಸುಮಧುರ ಗೀತೆಯೊಂದಿಗೆ ಹಿಂದೆ ಧಾವಿಸುವ ಜನರ ಆತಂಕದ ಗೊಣಗಾಟವು ಇದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಐಐಎಸ್‌ಸಿ ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ನೊಟೋರಿಯಸ್‌ ಭಯೋತ್ಪಾದಕ ಸೈಫುಲ್ಲಾ ಖಾಲಿದ್‌ ಹತ್ಯೆ

ಕ್ಲಿಪ್  ಅನ್ನು 22 ಲಕ್ಷ ಜನರು ನೋಡಿದ್ದಾರೆ, ಸಂಖ್ಯೆಗಳು ವೇಗವಾಗಿ ಹೆಚ್ಚುತ್ತಿವೆ. ವೀಡಿಯೊ ಟೈಟಾನಿಕ್ ಚಲನಚಿತ್ರದ ಅನೇಕ ದೃಶ್ಯವನ್ನು ನೆನಪಿಸಿದರೆ, ಇತರರು ಇದು ಆಸ್ಕರ್ ವಿಜೇತ ಚಲನಚಿತ್ರ ದಿ ಪಿಯಾನಿಸ್ಟ್‌ನ ಕಥಾವಸ್ತುವಿನಂತೆಯೇ ಇದೆ ಎಂದು ಹೇಳಿದ್ದಾರೆ. ಮತ್ತೆ ಕೆಲವರು ಕಣ್ಣೀರು ಎಂದು ಹೇಳಿದ್ದಾರೆ.
ಉಕ್ರೇನ್ ರಕ್ಷಣಾ ಸಚಿವಾಲಯವು ‘ಇಂಟರ್ನ್ಯಾಷನಲ್ ಲೀಜನ್ ಆಫ್ ಉಕ್ರೇನ್’ ನ ಭಾಗವಾಗಿ ರಷ್ಯಾದ ವಿರುದ್ಧ ನಡೆಯುತ್ತಿರುವ ಯುದ್ಧದ ಹೋರಾಟದಲ್ಲಿ ಸ್ವಯಂಸೇವಕರಾಗಿ ಸೇರ್ಪಡೆಗೊಳ್ಳಲು ವಿದೇಶಿ ಪ್ರಜೆಗಳಿಗೆ ಕರೆ ನೀಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement