ಹಿಂದೂ’ ಎಂಬ ಪದಕ್ಕೆ ಅಸಭ್ಯ ಅರ್ಥಗಳಿವೆ, ಇದು ಪರ್ಷಿಯಾದಿಂದ ಬಂದ ಪದ : ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ಹಿಂದೂ ಎಂಬ ಪದ ಪರ್ಷಿಯಾದಿಂದ ಬಂದ ಪದ ಆ ಆ ಪದಕ್ಕೆ ಅಸಭ್ಯವಾದ ಅರ್ಥಗಳಿವೆ. ಬೇಕಾದರೆ ಯಾರಾದರೂ ಗೂಗಲ್ ನಲ್ಲಿ ಸರ್ಚ್ ಮಾಡಿ ನೋಡಬಹುದು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ  ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ  ನಿಪ್ಪಾಣಿಯಲ್ಲಿ ಮಾನವ ಬಂಧುತ್ವ ವೇದಿಕೆ  ಆಯೋಜಿಸಿದ್ದ  ಬುದ್ಧ ಮತ್ತು ಅಂಬೇಡ್ಕರ್ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಪದವೆಂದರೆ ಅದು ಅಸಭ್ಯ ಅರ್ಥಗಳನ್ನು ಕೊಡುವಂಥ ಪದವಾಗಿದೆ. ಅದು ಪರ್ಷಿಯಾ ಮೂಲದ ಪದವಾಗಿದ್ದು, ಅದಕ್ಕೂ ನಮ್ಮ ಭಾರತಕ್ಕೂ ಏನು ಸಂಬಂಧವಿದೆ ಹೇಳಿ? ಎಂದರು.

ಹಿಂದೂ ಎಂಬ ಪದ ಎಲ್ಲಿಂದ ಬಂತು? ಇದು ನಮ್ಮದೇ? ಇದು ಪರ್ಷಿಯನ್‌. ಇರಾನ್, ಇರಾಕ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್ ಪ್ರದೇಶದಿಂದ ಬಂದಿದ್ದು. ಈ ಪದಕ್ಕೂ ಭಾರತಕ್ಕೂ ಏನು ಸಂಬಂಧ? ನೀವು ಅದನ್ನು ಹೇಗೆ ಒಪ್ಪಿಕೊಳ್ಳವಿರಿ? . ಈ ಬಗ್ಗೆ ಚರ್ಚೆಯಾಗಬೇಕು ಎಂದರು.ನಾವು ಹಿಂದೂಗಳು ಎಂದು ಬೀಗುವ ಇಂದಿನ ಯುವಕರು ತಮ್ಮ ಗೂಗಲ್ ನಲ್ಲಿ, ವಾಟ್ಸ್ ಆ್ಯಪ್ ಗಳಲ್ಲಿ, ವಿಕಿಪೀಡಿಯಾದಲ್ಲಿ ಹಿಂದೂ ಎಂಬ ಪದದ ಅರ್ಥ ತಿಳಿದುಕೊಳ್ಳಲು ಪ್ರಯತ್ನಿಸಬೇಕು. ಆ ಪದವನ್ನು ನಮ್ಮ ಮೇಲೆ ಏಕೆ ಬಲವಂತವಾಗಿ ಹೇರಿದರು ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಅದರ ನಿಜವಾದ ಅರ್ಥ ಗೊತ್ತಾದಾಗ, ಅವರಿಗೆ ಆ ಶಬ್ದ ನಮ್ಮದಲ್ಲ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.

ತಮ್ಮ ಮಾತುಗಳನ್ನು ಮುಂದುವರಿಸಿದ ಅವರು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂಥ ಸುಳ್ಳು ಹೇಳುವ ಇಬ್ಬರನ್ನು ಈ ದೇಶದ ನಾಯಕರನ್ನಾಗಿಸಿದ್ದೇವೆ ಎಂದು ಟೀಕಿಸಿದರು.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

4.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement