ಧರ್ಮಸ್ಥಳ | ಶವಗಳ ಹೂತಿಟ್ಟ ಪ್ರಕರಣ : 13 ಜಾಗ ತೋರಿಸಿದ ದೂರುದಾರ

ಮಂಗಳೂರು : ಧರ್ಮಸ್ಥಳ ಪೊಲೀಸ್‌ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎಂದು ಆರೋಪಿಸಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನುಹೂತುಹಾಕಿದ ಸಾಕ್ಷಿ ದೂರುದಾರ ವ್ಯಕ್ತಿಯು 13 ಸ್ಥಳಗಳನ್ನು ವಿಶೇಷ ತನಿಖಾ ತಂಡ(SIT)ದ ಅಧಿಕಾರಿಗಳಿಗೆ ತೋರಿಸಿದ್ದಾರೆ.
ವಿಶೇಷ ತನಿಖಾ ತಂಡ (SIT) ಮಂಗಳೂರಿನಲ್ಲಿ ಎರಡು ದಿನಗಳ ವಿಚಾರಣೆಯ ನಂತರ ಈ ಬೆಳವಣಿಗೆ ನಡೆದಿದೆ. ಮಾಹಿತಿ ಬಹಿರಂಗಪಡಿಸುವ ವ್ಯಕ್ತಿ, 1998 ಮತ್ತು 2014 ರ ನಡುವೆ ಧರ್ಮಸ್ಥಳದಲ್ಲಿ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರ ಶವಗಳನ್ನು ಹೂಳಲು ಮತ್ತು ದಹನ ಮಾಡಲು ಬಲವಂತಪಡಿಸಲಾಯಿತು ಎಂದು ಆರೋಪಿಸಿದ್ದಾರೆ.

ಎಸ್‌ಐಟಿ ಬೆಳಗ್ಗೆ ಸ್ನಾನಘಟ್ಟದ ಎಡಭಾಗದಲ್ಲಿರುವ ಅರಣ್ಯ ಸ್ಥಳದಲ್ಲಿ ಪರಿಶೀಲನೆ ಮಾಡಿತ್ತು. ಬಳಿಕ ನೇತ್ರಾವತಿ ಸೇತುವೆ ಹಾಗೂ ಸ್ನಾನಘಟ್ಟದ ಮಧ್ಯಭಾಗದ ಕಾಡಿನಲ್ಲಿ ಸ್ಥಳ ಪರಿಶೀಲಿಸಿ, ಮೂರನೇ ಸ್ಥಳವಾಗಿ ನೇತ್ರಾವತಿ ಸ್ನಾನಘಟ್ಟದ ಬಲ ಭಾಗದ ಅಜಿಕುರಿ ರಸ್ತೆಯಲ್ಲಿ ಸ್ಥಳ ಪರಿಶೀಲನೆ ಮಾಡಿತ್ತು. ಸದ್ಯ ಈವರೆಗೆ ದೂರುದಾರ 13 ಸ್ಥಳಗಳನ್ನು ಗುರುತು ಮಾಡಿದ್ದಾರೆ ಎನ್ನಲಾಗಿದೆ.
ನೇತ್ರಾವತಿ ಸ್ನಾನಘಟ್ಟ ಹಾಗೂ ಸಮೀಪದ ಕಾಡಿನಲ್ಲಿ ಒಳಗೆ 1 ಕಿ.ಮೀ. ವ್ಯಾಪ್ತಿಯಲ್ಲಿ ಸ್ಥಳ ಮಹಜರು ನಡೆಸಿದರು. ದೂರುದಾರ ತಂದಿರುವ ತಲೆಬುರುಡೆಯಲ್ಲಿದ್ದ ಮಣ್ಣನ್ನು ತಾಳೆ ಮಾಡಲು ನೇತ್ರಾವತಿ ಸ್ನಾನಘಟ್ಟದ ಅರಣ್ಯ ಪ್ರದೇಶದಲ್ಲಿ ಮಣ್ಣನ್ನು ಸಹ ಎಸ್‌ಐಟಿ ಸಂಗ್ರಹಿಸಿದೆ.

ಪ್ರಮುಖ ಸುದ್ದಿ :-   ಇಂದು ಸಿಎಂ ಆಗಿ ಡಿಕೆ ಶಿವಕುಮಾರ ಪ್ರಮಾಣ ವಚನ: ಪರಮೇಶ್ವರ ಡಿಸಿಎಂ ; 13 ಶಾಸಕರಿಗೆ ಸಚಿವ ಸ್ಥಾನ ; ಪಟ್ಟಿ ಇಲ್ಲಿದೆ

ಶನಿವಾರ ಮತ್ತು ಭಾನುವಾರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಗುಪ್ತಚರ ಬ್ಯೂರೋ ಕಚೇರಿಯಲ್ಲಿ ಅವರು ತಮ್ಮ ವಕೀಲರೊಂದಿಗೆ ಮತ್ತು ಗುರುತು ಮರೆಮಾಡಲು ಕಪ್ಪು ಮುಖವಾಡ ಧರಿಸಿ ಹಾಜರಾಗಿದ್ದರು. ಅವರ ಹೇಳಿಕೆಯನ್ನು ತನಿಖಾಧಿಕಾರಿ ಜಿತೇಂದ್ರಕುಮಾರ ದಯಾಮ ದಾಖಲಿಸುತ್ತಿದ್ದಾರೆ.
ಧರ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಅಸ್ವಾಭಾವಿಕ ಸಾವುಗಳು, ಕಣ್ಮರೆಗಳು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ರಾಜ್ಯ ಸರ್ಕಾರ ಜುಲೈ 19 ರಂದು ಎಸ್‌ಐಟಿಯನ್ನು ರಚಿಸಿ ಆದೇಶ ಹೊರಡಿಸಿತ್ತು. ಅದರಂತೆ ಈಗ ತನಿಖೆ ನಡೆಯುತ್ತಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement