ಕನಿಷ್ಠ ಬೆಂಬಲ ನೀಡಲು ಬದ್ಧ

ನವ ದೆಹಲಿ: 2021ನೇ ಸಾಲಿನ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರೈತರ ಏಳ್ಗೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದ್ದು,  ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಣೆಗೆ  ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಬೆಳೆಗಳು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗುವಂತೆ ಸರ್ಕಾರ ಮಾಡುತ್ತದೆ.  ವರ್ಷದಿಂದ ವರ್ಷಕ್ಕೆ ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಹಣ ನೀಡುತ್ತಿದೆ ಎಂದು  ಹೇಳಿದರು.

 ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿರುವುದರಿಂದ 1.54 ಕೋಟಿ ರೈತರಿಗೆ ಅನುಕೂಲವಾಗಿದೆ.  ಕಳೆದ ವರ್ಷ 1.24 ಕೋಟಿ ಜನರಿಗೆ ಭತ್ತದ ಬೆಂಬಲ ಬೆಲೆಯಿಂದ ಲಾಭವಾಗಿತ್ತು. ಭತ್ತ ಬೆಳೆಗಾರರಿಗೆ ಪ್ರಸಕ್ತ ವರ್ಷ 1.72  ಲಕ್ಷ ಕೋಟಿ ರೂ.  ನೀಡಲಾಗುತ್ತಿದ್ದು, ಕಳೆದ  ವರ್ಷ   1.41 ಲಕ್ಷ ಕೋಟಿ ರೂ. ನೀಡಲಾಗಿತ್ತು ಎಂದರು.

ಗೋಧಿಗೆ  ಬೆಂಬಲ ಬೆಲೆಯಾಗಿ ಈ ವರ್ಷ 75 060 ಕೋಟಿ ರೂ.ನೀಡಲಾಗುತ್ತಿದೆ. ಹಿಂದಿನ ವರ್ವಷ ರ್ಷ 62  802 ಕೋಟಿ ರೂ. ನೀಡಲಾಗಿತ್ತು. ಧಾನ್ಯಕ್ಕೆ ಈ ವರ್ಷ 10530 ಕೋಟಿ ರೂ.ಗಳನ್ನು ನೀಡಲಾಗುತ್ತಿದ್ದು,  ಹಿಂದಿನ ವರ್ಷ 8 285 ಕೋಟಿ  ರೂ.ಗಳಷ್ಟು ನೀಡಲಾಗಿತ್ತು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಈ ವರ್ಷ 16.5 ಲಕ್ಷ ಕೋಟಿ ರೂ.ಗಳಷ್ಟು ಕೃಷಿ ಸಾಲ ನೀಡುವ  ಗುರಿ ಹೊಂದಲಾಗಿದೆ. ಕಳೆದ ವರ್ಷ 15 ಲಕ್ಷ ಕೋಟಿ ರೂ.ಗಳಷ್ಟಿತ್ತು. ಕೊಳೆಯುವ ಅಥವಾ ಹಾಳಾಗುವ ಉತ್ಪನ್ನಗಳ ಪಟ್ಟಿಗೆ 22 ಕೃಷಿ ಉತ್ಪನ್ನಗಳನ್ನು ಸೇರ್ಪಡೆ ಮಾಡಲಾಗಿದೆ. ಪಶುಸಂಗೋಪನೆ, ಡೇರಿ, ಮೀನುಗಾರಿಕೆಗೆ ₹40 ಸಾವಿರ ಕೋಟಿ ನೀಡಲಾಗುತ್ತಿದೆ ಎಂದರು.

ಕನಿಷ್ಠ ಬೆಂಬಲ ಬೆಲೆ ನಿಲ್ಲಿಸಿಲ್ಲ ಎಂದು ವಿತ್ತ ಸಚಿವರು,  ಖರೀದಿ ಪ್ರಕ್ರಿಯೆ ಮುಂದುವರಿದಿದೆ. ಕಳೆದ ವರ್ಷ ಕನಿಷ್ಠ ಬೆಂಬಲ ಬೆಲೆಯಡಿ 75 100 ಕೋಟಿ ರೂಪಾಯಿಗಳನ್ನು ಗೋಧಿ ಬೆಳೆಗಾರರಿಗೆ ನೀಡಲಾಗಿತ್ತು. ಇದರಿಂದ 43 ಲಕ್ಷ ಗೋಧಿ ಬೆಳೆಗಾರರು ಪ್ರಯೋಜನ ಪಡೆದುಕೊಂಡಿದ್ದರು. ಇನ್ನೂ ಸಾವಿರ ಮಂಡಿಗಳನ್ನು ಎಲೆಕ್ಟ್ರಾನಿಕ್ ರಾಷ್ಟ್ರೀಯ ಮಾರುಕಟ್ಟೆಯ ಜೊತೆ ಸಂಯೋಜಿಸಲಾಗುವುದು. ಈ ವರ್ಷ ಕೃಷಿ ಕ್ರೆಡಿಟ್ ಗುರಿಯನ್ನು 16.5 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಮೂಲಸೌಕರ್ಯಗಳ ಅಭಿವೃದ್ಧಿಗೆ ಕೃಷಿ ಉತ್ಪನ್ನ ಮಾರುಕಟ್ಟೆಗಳ (ಎಪಿಎಂಸಿ) ಮೂಲಕ ಕೃಷಿ ಮೂಲ ಸೌಕರ್ಯಗಳು ಸಿಗುವಂತೆ ಮಾಡಲಾಗುವುದು. ಇದರ ಅಡಿ ನಿಧಿಯನ್ನು ೪೦೦೦೦ ಕೋಟಿ ರೂ.ಗಳಿಗೆ   ಹೆಚ್ಚಿಸಲಾಗಿದೆ. ಸಣ್ಣ ನೀರಾವರಿ ನಿಧಿಯನ್ನು 10 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿದ್ದು ಎರಡು ಪಟ್ಟು ಹೆಚ್ಚಿಸಲಾಗಿದೆ ಎಂದರು.

ಪ್ರಮುಖ ಸುದ್ದಿ :-   ವಿಭವಕುಮಾರ 7-8 ಬಾರಿ ನನ್ನ ಕಪಾಳಕ್ಕೆ ಹೊಡೆದಿದ್ದಾನೆ, ಹೊಟ್ಟೆಗೆ ಒದ್ದಿದ್ದಾನೆ....: ಎಫ್‌ಐಆರ್‌ನಲ್ಲಿ ಸಂಸದೆ ಸ್ವಾತಿ ಮಲಿವಾಲ್ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement