ಕೇಂದ್ರ ಬಜೆಟ್‌:ಮೂಲ ಸೌಕರ್ಯಕ್ಕೆ ಉತ್ತೇಜನ

 

ನವ ದೆಹಲಿ: ಭಾರತದ ಮೂಲಸೌಕರ್ಯಗಳನ್ನು ಹೆಚ್ಚಿಸುವ ಬದ್ಧತೆಯೊಂದಗೆ ಹಣಕಾಸು ಸಚಿವರು  ಹಲವಾರು ಘೋಷಣೆಗಳನ್ನು ಮಾಡಿದ್ದು,   ಮುಂಬರುವ ವರ್ಷಗಳಲ್ಲಿ ದೇಶದ ಮೂಲ ಸೌಕರ್ಯ ವಲಯಕ್ಕೆ ಭಾರಿ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಸೋಮವಾರ,  ನಿರ್ಮಲಾ, ತಮ್ಮ ಬಜೆಟ್ ಭಾಷಣದಲ್ಲಿ ರಾಷ್ಟ್ರದಾದ್ಯಂತ 8,500 ಕಿ.ಮೀ ಹೆದ್ದಾರಿಗಳನ್ನು ನಿರ್ಮಿಸುವ ಯೋಜನೆಗಳಿಗೆ ಮಾರ್ಚ್ 2022 ರೊಳಗೆ ಪ್ರಶಸ್ತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.  ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ 25,000 ಕೋಟಿ ರೂ.ವೆಚ್ಚದಲ್ಲಿ ಹೆದ್ದಾರಿ ಯೋಜನೆಗಳನ್ನು ನೀಡಲಾಗುವುದು ಎಂದು ಹೇಳಿದರು.

ಕೇರಳ ರಾಜ್ಯದಲ್ಲಿ 65,000 ಕೋಟಿ ರೂ.ಗಳ ಹೆದ್ದಾರಿ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿರುವ ವಿತ್ತ ಸಚಿವರು ಪ್ರಸ್ತುತ ಕೇಂದ್ರ ಬಜೆಟ್ 2021 ಸಹ ಅಸ್ಸಾಂ ರಾಜ್ಯದಲ್ಲಿ ರಸ್ತೆ ಯೋಜನೆಗಳಿಗೆ 3,400 ಕೋಟಿ ರೂ. ನೀಡಲಿದೆ ಎಂದಿದ್ದಾರೆ.

ಐದು ವರ್ಷಗಳ ಅವಧಿಯಲ್ಲಿ  ಸ್ವಚ್ಛ ಭಾರತ್ 2.0 ಅನ್ನು 1,41,678 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದ ಸಚಿವರು ಏಳು ಬಂದರು ಯೋಜನೆಗಳನ್ನು ಪ್ರಕಟಿಸಿದರು.

ಈ ಯೋಜನೆಗಳು 2,000 ಕೋಟಿ ರೂ. ವೆಚ್ಚದ್ದಾಗಿದ್ದು,  ಸಾರ್ವಜನಿಕ -ಖಾಸಗಿ ಸಹಭಾಗಿತ್ವದ (ಪಿಪಿಪಿ) ಮೂಲಕ  ಯೋಜನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement