ಕೇಂದ್ರ ಸರ್ಕಾರದ ಬಜೆಟ್‌ಗೆ ಸಿಪಿಐ ವಿರೋಧ

ಬೆಂಗಳೂರು: ಕೇಂದ್ರ ಸರ್ಕಾರವು  ಮಂಡಿಸಿದ  ೨೦೨೧-೨೨ನೇ ಸಾಲಿನ ಬಜೆಟ್‌  ಜನಸಮಾನ್ಯರ ಮೇಲೆ ಮತ್ತಷ್ಟು ತೆರಿಗೆಗಳನ್ನು ಹೊರಿಸಿದೆ ಎಂದು ಸಿಪಿಐ ಪಕ್ಷ ಹೇಳಿದೆ.

ಈ ಬಜೆಟ್ ಜನ-ವಿರೋಧಿ ಹಾಗೂ ನಿರಾಶಾದಾಯಕವಾಗಿದೆ, ಸರ್ಕಾರದ ದುಷ್ಟ ಆರ್ಥಿಕ ನೀತಿಗಳಿಂದಾಗಿ ಮತ್ತು ಕೋವಿಡ್-೧೯ನ್ನು ಸರ್ಕಾರ ಸಮರ್ಪಕವಾಗಿ ನಿಭಾಯಿಸದೇ ಹೋದ ಕಾರಣ, ನಿರುದ್ಯೋಗ ಹೆಚ್ಚಾಗಿದ್ದು ಸಾವಿರಾರು ಜನರು ಬೀದಿಪಾಲಾಗಿದ್ದಾರೆ, ಸರ್ಕಾರದ ತೆರಿಗೆ ಹೆಚ್ಚಳದ ನೀತಿ ದೇಶದ ಆರ್ಥಿಕತೆಯ ಮೇಲೆ ಮತ್ತಷ್ಟು ದುಷ್ಪರಿಣಾಮ ಬೀರಿ ಆರ್ಥಿಕಸಂಕಷ್ಟ ಹೆಚ್ಚಾಗಲಿದೆ.
ಬಿಜೆಪಿ ತಾನು ಆಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲಗಳ ಬೆಲೆಗಳನ್ನು
ಕಡಿಮೆ ಮಾಡುವುದಾಗಿ ಅಶ್ವಾಸನೆಯನ್ನು ನೀಡಿತ್ತು ಹಾಗೂ ಬೆಲೆ ಏರಿಕೆಯನ್ನು ನಿಯಂತ್ರಿಸುವುದಾಗಿ
ಭರವಸೆ ಕೊಟ್ಟಿತ್ತು. ಆದರೆ ಈಗ ಇದಕ್ಕೆ ವಿರುದ್ಧ್ದವಾಗಿ ಪೆಟ್ರೋಲ್, ಅಡುಗೆ ಅನಿಲ, ಡೀಸೆಲ್,
ಬೇಳೆಕಾಳು, ಅಡುಗೆ ಎಣ್ಣೆಗಳ ಮೇಲೆ ತೆರಿಗೆಯನ್ನು ಹೆಚ್ಚಿಸಿ ಮತ್ತಷ್ಟು ಬೆಲೆ ಏರಿಕೆಗೆ ಅವಕಾಶ
ಮಾಡಿಕೊಟ್ಟಿದೆ ಎಂದು ಪಕ್ಷದ ಕಾರ್ಯದರ್ಶಿ ಜಿ.ಬಾಬು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಬಜೆಟ್ ಕಾರ್ಪೋರೇಟ್ ಪರವಾಗಿದ್ದು ಕೃಷಿ ಹೆಸರಿನಲ್ಲಿ ಜನಸಾಮಾನ್ಯರ ವಿರುದ್ಧ
ತೆರಿಗೆ ಹೆಚ್ಚಳವನ್ನು ಮಾಡಲು ಉದ್ದೇಶಿಸುವುದನ್ನು ಕೈ ಬಿಡಬೇಕೆಂದು ಹಾಗೂ ಆದಾಯ ತೆರಿಗೆಯನ್ನು
ಸಹ ಪುನರ್‌ಪರಿಶೀಲಿಸಬೇಕೆಂದು ಸಿಪಿಐ ಒತ್ತಾಯಿಸುತ್ತದೆ. ಕೇಂದ್ರ ಸರ್ಕಾರದ ಬಜೆಟ್ ವಿರುದ್ಧಭಾರತ
ಕಮ್ಯುನಿಸ್ಟ್ ಪಕ್ಷದ ಬೆಂಗಳೂರು ಜಿಲ್ಲಾ ಮಂಡಳಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ಏಷ್ಯನ್ ಗೇಮ್ಸ್ 2023 : ಶೂಟಿಂಗ್-ಮಹಿಳೆಯರ 25 ಮೀ ಪಿಸ್ತೂಲ್ ಟೀಮ್ ಈವೆಂಟ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

 

 

(

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement