ಪ್ರತಿ ಲೀಟರ್‌ ಪೆಟ್ರೋಲಿಗೆ ೨.೫ ರೂ. ಕೃಷಿ ಸೆಸ್‌

ನವದೆಹಲಿ:  2021-22ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಇಂಧನದ ಮೇಲೆ ಕೃಷಿ ಸೆಸ್ ಅನ್ನು ಪ್ರಸ್ತಾಪಿಸಲಾಗಿದೆ.   ಬಜೆಟ್ ಅಡಿಯಲ್ಲಿ, ಸರ್ಕಾರವು ಪೆಟ್ರೋಲಿಗೆ  ಪ್ರತಿ ಲೀಟರಿಗೆ 2.5 ರೂ. ಹಾಗೂ ಪ್ರತಿ ಲೀಟರ್‌ ಡೀಸೆಲ್‌ಗೆ 4 ರೂ.ಗಳ ಕೃಷಿ ಸೆಸ್ ಅನ್ನು ಹಾಕುವ ಬಗ್ಗೆ  ಪ್ರಸ್ತಾಪಿಸಲಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (ಎಐಡಿಸಿ) ಹೇರುವ ಪರಿಣಾಮವಾಗಿ, ಮೂಲ ಅಬಕಾರಿ ಸುಂಕ (ಬಿಇಡಿ) ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್‌ಎಇಡಿ) ದರಗಳನ್ನು ಅವುಗಳ ಮೇಲೆ ಕಡಿಮೆ ಮಾಡಲಾಗಿದೆ, ಇದರಿಂದಾಗಿ ಒಟ್ಟಾರೆಯಾಗಿ ಗ್ರಾಹಕರ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರತನ್ ಟಾಟಾ : ಶಿಕ್ಷಣದಿಂದ ಹಿಡಿದು ಲೋಕೋಪಕಾರದ ವರೆಗೆ...ಟಾಟಾ ಪರಂಪರೆಯ ಹಿಂದಿನ ವ್ಯಕ್ತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement