ನವ ದೆಹಲಿ:ಆರೋಗ್ಯ ಕ್ಷೇತ್ರಕ್ಕೆ ಕಳೆದ ಆರ್ಥಿಕ ವರ್ಷಕ್ಕಿಂತ ದುಪ್ಪಟ್ಟು ಅನುದಾನ ನಿಗದಿ ಮಾಡಿರುವುದಾಗಿ ಕೇಂದ್ರ ಸಚಿವೆ ನಿರ್ಮಲಾಸೀತಾರಾಮನ್ ಹೇಳಿದ್ದಾರೆ.
2021-22ನೇ ಸಾಲಿಗೆ ಕೇಂದ್ರ ಸರ್ಕಾರ ಆರೋಗ್ಯ ಮತ್ತು ಯೋಗಕ್ಷೇಮ ಕ್ಷೇತ್ರಕ್ಕೆ 2.23 ಲಕ್ಷ ಕೋಟಿ ರೂ.ಗಳನ್ನು ನೀಡಿದೆ. ಆತ್ಮನಿರ್ಭರ್ ಆರೋಗ್ಯ ಯೋಜನೆಯ ಹೊಸ ಕಾರ್ಯಕ್ರಮಗಳಿಗೆ 64180 ಕೋಟಿ ರೂ.ಗಳನ್ನು ಮುಂದಿನ ಆರು ವರ್ಷಗಳಿಗೆ ನಿಗದಿಪಡಿಸಲಾಗಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವನ್ನು ಬಲಪಡಿಸಲು ಕೇಂದ್ರ ಸರ್ಕಾರ 55 ಆರೋಗ್ಯ ತುರ್ತು ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲು ನಿರ್ಧರಿಸಿದೆ. ಭಾರತ ಆರೋಗ್ಯ ಯೋಜನೆಯಡಿ ಕೊರೊನಾ ಲಸಿಕೆಗಾಗಿ 35ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಈಗಾಗಲೇ ಎರಡು ಲಸಿಕೆಗಳು ಲಭ್ಯವಿದ್ದು, ಇನ್ನಷ್ಟು ಹೊಸ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ನ್ಯುಮೋಕೊಕಲ್ ಕಾಯಿಲೆಯ ಲಸಿಕೆಯನ್ನು ಈವರೆಗೂ ಐದು ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಈಗ ಅದನ್ನು ದೇಶಾದ್ಯಂತ ವಿಸ್ತರಣೆ ಮಾಡಲಾಗಿದೆ. ಇದರ ಮೂಲಕ ಪ್ರತಿ ವರ್ಷ ಸಂಭವಿಸುತ್ತಿರುವ 50ಸಾವಿರ ಮಕ್ಕಳ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶವಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಒಟ್ಟು ಆರೋಗ್ಯ ಕ್ಷೇತ್ರಕ್ಕೆ 2,23,886 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಕಳೆದ ಸಾಲಿನ ಬಜೆಟ್‍ಗಿಂತ ಶೇ.136ರಷ್ಟು ಹೆಚ್ಚಾಗಿದೆ ಎಂದರು
ನಿಮ್ಮ ಕಾಮೆಂಟ್ ಬರೆಯಿರಿ