ನವದೆಹಲಿ: ಶಾಲಾ ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್ಟಿನಲ್ಲಿ ಹಣ ನೀಡಿಕೆ ಪ್ರಮಾಣ ಈ ಬಜೆಟ್‌ನಲ್ಲಿ ಕುಸಿತ ಕಂಡಿದೆ. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮುಂಬರುವ ಹಣಕಾಸು ವರ್ಷದಲ್ಲಿ 54,873.66 ಕೋಟಿ ರೂ.ಗಳನ್ನು ಪಡೆಯಲಿದ್ದು, ಇದು ಎರಡು ವರ್ಷಗಳಲ್ಲಿ ನಿಗದಿಪಡಿಸಿದ ಅತ್ಯಂತ ಕಡಿಮೆ ಬಜೆಟ್ ಆಗಿದೆ.
ಕೊರೋನಾ ವೈರಸ್‌ನಿಂದ ತೊಂದರೆಗೊಳಗಾಗಿರುವ ಶಾಲಾ ಶಿಕ್ಷಣಕ್ಕೆ ಹಂಚಿಕೆ ಕಡಿಮೆಯಾಗಿದೆ.
ಒಟ್ಟಾರೆಯಾಗಿ, ಶಿಕ್ಷಣ ಸಚಿವಾಲಯದ ಬಜೆಟ್ ಅನ್ನು 6,086.69 ಕೋಟಿ ರೂ.ಗಳಷ್ಗಟು ಕಡಿಮೆ ಮಾಡಲಾಗಿದೆ. 2020-21 ಹಣಕಾಸು ವರ್ಷದಲ್ಲಿ 99,311 ಕೋಟಿ ರೂ.ಗಳಿದ್ದಿದ್ದನ್ನು 2021-22ರಲ್ಲಿ 93,224.31 ಕೋಟಿ ರೂ.ಗೆ ಇಳಿಸಲಾಗಿದೆ.
ಇತ್ತೀಚೆಗೆ ಜಾರಿಗೆ ಬಂದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಶಿಕ್ಷಣ ಕ್ಷೇತ್ರವನ್ನು ಪುನರುಜ್ಜೀವನಗೊಳಿಸುವ ವೇಗವನ್ನು ನಿಗದಿಪಡಿಸಿತ್ತು, ಆದಾಗ್ಯೂ, ಶಾಲಾ ಶಿಕ್ಷಣ ಬಜೆಟ್ 5,000 ಕೋಟಿ ರೂ.ಗಳಷ್ಟು ಕಡಿತಗೊಂಡಿರುವುದು ಶಿಕ್ಷಣ ಮೂಲಸೌಕರ್ಯ, ಕಲಿಕೆ ಮತ್ತು ಶಿಕ್ಷಣದ ವಿತ್ತೀಯದಲ್ಲಿ ಅಂತರ ಸೃಷ್ಟಿಸುವ ಸಾಧ್ಯತೆಯಿದೆ.
ಸಮಗ್ರ ಶಿಕ್ಷಣ ಅಭಿಯಾನ: ರಾಷ್ಟ್ರದ ಅತಿದೊಡ್ಡ ಶಾಲಾ ಶಿಕ್ಷಣ ಯೋಜನೆಗಳಲ್ಲಿ ಒಂದಾದ ಸಮಗ್ರ ಶಿಕ್ಷಣ ಅಭಿಯಾನವು ಕಳೆದ ವರ್ಷ 38,750.50 ಕೋಟಿಗಳಿಂದ ಈ ವರ್ಷ 31,050.16 ಕೋಟಿ ರೂ.ಗೆ ಇಳಿದಿದೆ. ಸೆಕೆಂಡರಿ ಶಿಕ್ಷಣಕ್ಕಾಗಿ ಬಾಲಕಿಯರಿಗೆ ಪ್ರೋತ್ಸಾಹ ನೀಡುವ ರಾಷ್ಟ್ರೀಯ ಯೋಜನೆಗೆ 100 ಕೋಟಿ ರೂ. ಗೂ ಹೆಚ್ಚು ಹಣ ಕಡಿತಗೊಡಿದೆ. ಕಳೆದ ವರ್ಷ 110 ಕೋಟಿ ರೂ.ಗಳನ್ನು ನೀಡಲಾಗಿತ್ತು. ಈ ವರ್ಷ ಈ ಯೋಜನೆಗೆ 1 ಕೋಟಿ ರೂ.ನೀಡಲಾಗಿದೆ.
ಹೆಚ್ಚು ಹಣ: ಕೇಂದ್ರೀಯ ವಿದ್ಯಾಲಯಗಳಿಗೆ ಕಳೆದ ವರ್ಷ ನೀಡಿದ್ದ 5,516 ಕೋಟಿ ರೂ.ಗಳಿಗೆ ಹೋಲಿಸಿದರೆ ಮುಂಬರುವ ಹಣಕಾಸು ವರ್ಷದಲ್ಲಿ 6,800 ಕೋಟಿ ರೂ.ಗಳನ್ನು ನೀಡಲಾಗಿದ್ರುದು, ಕೇಂದ್ರೀಯ ವಿದ್ಯಾಲಯಗಳಿಗೆ ಹಣ ಹೆಚ್ಚಾಗಿದೆ.
ನವೋದಯ ವಿದ್ಯಾಲಯ ಸಮಿತಿ:ನವೋದಯ ವಿದ್ಯಾಲಯಗಳಿಗೆ ಬಜೆಟ್ ಹಂಚಿಕೆಯನ್ನು 500 ಕೋಟಿ ರೂ.ಹೆಚ್ಚಿಗೆ ನೀಡಲಾಗಿದೆ. ಕಳೆದ ವರ್ಷ ನವೋದಯ ವಿದ್ಯಾಲಯಗಳಿಗೆ 3,300 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದರೆ, ಈ ವರ್ಷ 3,800 ಕೋಟಿ ರೂ. ನೀಡಲಾಗಿದೆ.
ಶಾಲೆಗಳಲ್ಲಿ ಮಧ್ಯಾಹ್ನ ಊಟದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ೫೦೦ ಕೋಟಿ ರೂ. ಹೆಚ್ಚಿಗೆ ನೀಡಲಾಗಿದೆ.
ಕಳೆದ ವರ್ಷ 11,000 ರೂ.ಗಳನ್ನು ನೀಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ