ಎಟಿಎಂ ಹಲ್ಲೆ ಪ್ರಕರಣ: ಆರೋಪಿಗೆ ೧೦ ವರ್ಷ ಶಿಕ್ಷೆ

ಬೆಂಗಳೂರು :  2013ರಂದು  ರಾಜ್ಯವನ್ನೇ ಕಂಗಾಲು ಮಾಡಿದ್ದ   ಎಟಿಎಂ ಹಲ್ಲೆ ಪ್ರಕರಣದ ಅಪರಾಧಿ ಮಧುಕರಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ನಾಲ್ಕು ವರ್ಷಗಳ ಕಾಲ ಸುದೀರ್ಘ ವಾದ ಆಲಿಸಿದ ನ್ಯಾಯಾಲಯ  ಮಧುಕರ್ ಅಪರಾಧಿ ಎಂದು ಹೇಳಿತ್ತು ಹಾಗೂ ಶಿಕ್ಷೆ ಪ್ರಕಟಿಸುವುದನ್ನು ಮಂಗಳವಾರಕ್ಕೆ ಕಾಯ್ದಿರಿಸಿತ್ತು.  ಬೆಂಗಳೂರಿನ ಕಾರ್ಪೋರೇಷನ್ ಸರ್ಕಲ್ ನ ಕಾರ್ಪೋರೇಷನ್ ಎಟಿಎಂನಲ್ಲಿ ಮಹಿಳೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಮಧುಕರ ರೆಡ್ಡಿ, ಹಣ ದರೋಡೆ ಮಾಡಿದ್ದ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಹಾಗೂ  ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.

ಕಾರ್ಪೋರೇಷನ್ ಸರ್ಕಲ್ ನಲ್ಲಿರುವ ಕಾರ್ಪೋರೇಷನ್ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಬಂದಿದ್ದ ಬ್ಯಾಂಕ್ ಮ್ಯಾನೇಜರ್ ಜ್ಯೋತಿ ಉದಯ್  ಎಂಬವರ ಮೇಲೆ ಮಚ್ಚಿನಿಂದ  ಮಾರಣಾಂತಿಕವಾಗಿ  ಹಲ್ಲೆ ಮಾಡಿದ್ದ   ಮಧುಕರ ಹಣ ದೋಚಿಕೊಂಡು ಪರಾರಿಯಾಗಿದ್ದ.

ಪ್ರಕರಣ ಕುರಿತಂತೆ ವಿಚಾರಣೆ ನಡೆಸಿರುವಂತ 65ನೇ ಸಿಸಿಹೆಚ್ ಕೋರ್ಟ್ಆ ರೋಪಿ ಮಧುಕರ್ಗೆ   10 ವರ್ಷಗಳ   ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement