ಬೆಂಗಳೂರು: ರಕ್ಷಣಾ ಸಚಿವ ರಾಜನಾಥ ಸಿಂಗ್ ಇಲ್ಲಿನ ಹಿಂದೂಸ್ಥಾನ ಏರೊನಾಟಿಕ್ಸ್ ಲಿಮಿಟೆಡ್‌ನಲ್ಲಿ ದ್ವಿತೀಯ ಯುದ್ಧವಿಮಾನ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಯುದ್ಧವಿಮಾನ ಉತ್ಪಾದನೆ ದ್ವಿಗುಣಗೊಳಿಸುವ ಗುರಿ ಹೊಂದಲಾಗಿದ್ದು, ಭಾರತೀಯ ಫೈಟರ್ಜೆಟ್ ಎಲ್‌ಸಿಎ ತೇಜಸ್ ಉತ್ಪಾದನೆಯನ್ನು ಪ್ರತಿ ವರ್ಷಕ್ಕೆ ೧೬ಕ್ಕೆ ಹೆಚ್ಚಿಸಲಾಗುವುದು ಎಂದರು. ನಾವು ಯುದ್ಧ ವಿಮಾನಗಳಿಗಾಗಿ ಅನ್ಯ ದೇಶಗಳನ್ನು ಅವಲಂಬಿಸುವುದಿಲ್ಲ ಎಂದು ಅವರು ತಿಳಿಸಿದರು.
ಹಿಂದೂಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ ರಕ್ಷಣಾ ಪಡೆಗಳಿಂದ ೪೮,೦೦೦ ಕೋಟಿ ರೂ. ಆರ್ಡರ್ ಪಡೆದುಕೊಂಡಿದ್ದು, ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದ ಮೆರಗು ಇನ್ನಷ್ಟು ಹೆಚ್ಚಿಸಲಿದೆ ಎಂದರು.
ತೇಜಸ್ ಕೇವಲ ಭಾರತೀಯ ಯುದ್ಧ ವಿಮಾನವಷ್ಟೇ ಅಲ್ಲ, ಅದು ಇತರ ವಿದೇಶಿ ಸಮಾನ ಯುದ್ಧವಿಮಾನಗಳ ಹೋಲಿಕೆಯಲ್ಲಿ ಅತ್ಯುತ್ತಮವಾಗಿದೆ. ಅಲ್ಲದೇ ಕಡಿಮೆ ಮೊತ್ತದ ನಿರ್ಮಾಣವಾಗಿದೆ. ಅನೇಕ ದೇಶಗಳು ತೇಜಸ್ ಖರೀದಿಗೆ ಆಸಕ್ತಿ ತೋರಿವೆ. ರಕ್ಷಣಾ ಸಾಮಗ್ರಿ ಉತ್ಪಾದನಾ ಕ್ಷೇತ್ರದಲ್ಲಿ ಕೆಲ ವರ್ಷಗಳಲ್ಲಿ ಭಾರತ ೧.೭೫ ಲಕ್ಷ ಕೋಟಿ ಗುರಿ ತಲುಪುವುದು ನಿಶ್ಚಿತ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ