ಮುಂಬೈ: ಸಾರ್ವಜನಿಕ ವಲಯದ ಬ್ಯಾಂಕುಗಳ (ಪಿಎಸ್‌ಬಿ) ಖಾಸಗೀಕರಣ ಆರಂಭವಾದಂತೆ ತೊರುತ್ತಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಕೇಂದ್ರ ಸರ್ಕಾರವು ಒಂದು ಸಾಮಾನ್ಯ ವಿಮಾ ಕಂಪನಿಯ ಹೊರತಾಗಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ತನ್ನ ಪಾಲನ್ನು ತ್ಯಜಿಸಲಿದೆ ಎಂದು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಸೋಮವಾರ ಪ್ರಕಟಿಸಿದ್ದಾರೆ. ಇದಲ್ಲದೆ, ಐಡಿಬಿಐ ಬ್ಯಾಂಕಿನ ಹೂಡಿಕೆ ಪ್ರಕ್ರಿಯೆ ಮುಂದಿನ ಹಣಕಾಸು ವರ್ಷದಲ್ಲಿ ಪೂರ್ಣಗೊಳ್ಳಲಿದೆ.
ಸರ್ಕಾರವು ಖಾಸಗೀಕರಣಗೊಳಿಸಲು ಯೋಜಿಸಿರುವ ಎರಡು ಬ್ಯಾಂಕುಗಳ 2021 ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವರು ಹೆಸರಿಸಿಲ್ಲ. ಆದರೂ ಎರಡು ಪ್ರಮುಖ ಬ್ಯಾಂಕುಗಳು ಯಾವುದಿರಬಹುದು ಎಂಬುದರ ಕುರಿತು ಚರ್ಚೆ ಅರಂಭವಾಗಿದೆ.
13 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಐದಕ್ಕೆ ವಿಲೀನಗೊಳಿಸುವುದಾಗಿ ಸರ್ಕಾರವು ಘೋಷಿಸಿದ ನಂತರ, ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವತ್ತ ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ.
ಎರಡು ಪಿಎಸ್‌ಬಿ ಮತ್ತು ಒಂದು ವಿಮಾ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಸ್ತಾಪವು ಖಾಸಗೀಕರಣಕ್ಕೆ ಮುನ್ನುಡಿ ಬರೆದಂತಾಗಿದೆ. ಪ್ರ ಇದು ಅಂತಿಮವಾಗಿ ಇನ್ನೂ ಅನೇಕ ಬ್ಯಾಂಕುಗಳನ್ನು ಈ ವ್ಯಾಪ್ತಿಗೆ ತರಬಹುದು ಎಂದು ಬ್ಯಾಂಕಿಂಗ್ ಕ್ಷೇತ್ರದ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ