ಪ್ರಗತಿಗಾಗಿ ಭಾರತವು ಒಟ್ಟಾಗಿ ನಿಂತಿದೆ: ಅಮಿತ್‌ ಶಾ

ನವ ದೆಹಲಿ: ಪ್ರಚಾರವು ಭಾರತದ ಏಕತೆಗೆ ಭಂಗ ತರುವುದಿಲ್ಲ ಅಥವಾ ಭಾರತದ ಭವಿಷ್ಯವನ್ನೂ ನಿರ್ಧರಿಸುವುದಿಲ್ಲ. ಭಾರತವು ಒಗ್ಗಟ್ಟಿನಿಂದ ಮತ್ತು ಪ್ರಗತಿಯನ್ನು ಸಾಧಿಸಲು ಒಟ್ಟಾಗಿ ನಿಂತಿದೆ  ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಅವರು ಇಂಡಿಯಾ ಅಗೆನೆಸ್ಟ್‌ ಪ್ರೊಪಗಂಡ ಮತ್ತು   ಇಂಡಿಯಾ ಟುಗೆದರ್ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಹೀಗೆ ಬರೆದಿದ್ದಾರೆ. ಅನೇಕ ಮಂತ್ರಿಗಳು ಮತ್ತು ಬಿಜೆಪಿ ನಾಯಕರು ಈ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿ ಟ್ವೀಟ್ ಮಾಡಿದ್ದಾರೆ, ಇದನ್ನು ಮೊದಲು ವಿದೇಶಾಂಗ ಸಚಿವಾಲಯವು  ತನ್ನ ಹೇಳಿಕೆಯಲ್ಲಿ ಬಳಸಿದ್ದು, ಭಾರತ  ಏಕತೆಗೆ ಬದ್ಧವಾಗಿದೆ ಎಂದು ಹೇಳಿದೆ.

ಮಂಗಳವಾರ ಅಮೆರಿಕದ ಪಾಪ್ ಗಾಯಕಿ ರಿಹಾನಾ  ಅವರ ಟ್ವೀಟ್‌ನಿಂದ ಇದೆಲ್ಲ ನಡೆದಿದ್ದು,  ಅವರು ರೈತರ ಪ್ರತಿಭಟನೆ  ವಿಷಯ ಎತ್ತಿದ್ದರು. ಜನವರಿ 26 ರಂದು ದೆಹಲಿ ಪೊಲೀಸರು ಮತ್ತು ರೈತರು ನಡುವಿನ ಘರ್ಷಣೆಯ ನಂತರ ರಾಷ್ಟ್ರೀಯ ರಾಜಧಾನಿಯ ಹಲವಾರು ಜಿಲ್ಲೆಗಳಲ್ಲಿ ಇಂಟರ್ನೆಟ್ ಪ್ರವೇಶವು ಹೇಗೆ ಅಸ್ತವ್ಯಸ್ತಗೊಂಡಿದೆ ಎಂಬುದರ ಕುರಿತು ರಿಹಾನಾ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದರು.ಇದು ಸೋಶಿಯಲ್‌ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ವಿದೇಶಾಂಗ ಸಚಿವಾಲಯ ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಕೇಂದ್ರ ಸಚಿವರು ಇಂಡಿಯಾ ಅಗೆನೆಸ್ಟ್‌ ಪ್ರೊಪಗಂಡ ಮತ್ತು   ಇಂಡಿಯಾ ಟುಗೆದರ್ ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಆಂದೋಳನ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಮನೆ ಮುಂದೆಯೇ ಗುಂಡು ಹಾರಿಸಿ ಬಿಜೆಪಿ ನಾಯಕ-ಖ್ಯಾತ ಉದ್ಯಮಿ ಗೋಪಾಲ ಖೇಮ್ಕಾ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement