ಪ್ರಧಾನಿ ಸಹೋದರನಿಂದ ಲಕ್ನೋ ಏರ್‌ಪೋರ್ಟ್‌ನಲ್ಲಿ ಧರಣಿ..!

ಲಕ್ನೊ:  ಪ್ರಧಾನಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪ್ರಹ್ಲಾದ್ ಮೋದಿ  ಲಖನೌದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ಧರಣಿಯಲ್ಲಿ ನಡೆಸಿದ ವಿದ್ಯಾಮನ ನಡೆದಿದೆ.

ಅಖಿಲ ಭಾರತ ನ್ಯಾಯೋಚಿತ ಬೆಲೆ ಅಂಗಡಿಗಳ ಮಾರಾಟಗಾರರ ಒಕ್ಕೂಟದ (ಎಐಎಫ್‌ಪಿಎಸ್‌ಡಿಎಫ್) ಉಪಾಧ್ಯಕ್ಷರಾದ  ಪ್ರಹ್ಲಾದ್ ಮೋದಿ  ಲಕ್ನೋ ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸಿ ತಮ್ಮ ಸಹಚರರನ್ನು   ತಕ್ಷಣದಿಂದ ಬಿಡುಗಡೆ ಮಾಡದಿದ್ದರೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹಕ್ಕೆ ಮಾಡುವುದಾಗಿ ಎಚ್ಚರಿಸಿದರು. ಸಂಜೆ, ಸುಲ್ತಾನಪುರದಲ್ಲಿ ತಮ್ಮ ಸಹಚರನನ್ನು ಬಿಡುಗಡೆ ಮಾಡಿದ ನಂತರ ಧರಣಿ ಹಿಂಪಡೆದರು.

ಇದಕ್ಕೂ ಮುನ್ನ ಸುಲ್ತಾನಪುರ ಪೊಲೀಸರು  ಯಾವುದೇ ಅನುಮತಿ ಪಡೆಯದೆ  ಗುರುವಾರ  ಪ್ರಹ್ಲಾದ ಮೋದಿಯವರು   ಆಯೋಜಿಸಿದ್ದ   ಕಾರ್ಯಕ್ರಮದ ಕುರಿತು ಪೋಸ್ಟರ್‌ಗಳನ್ನು ಸುಲ್ತಾನಪುರದಾದ್ಯಂತ ಹಲವಾರು ಸ್ಥಳಗಳಲ್ಲಿ ಹಾಕಲಾಗಿತ್ತು.  ಕೊವಿಡ್‌ ನಿರ್ಬಂಧದ ಸಮಯದಲ್ಲಿ ಪೂರ್ವಾನುಮತಿಯಿಲ್ಲದೆ  ಪ್ರಧಾನಿ ನರೇಂದ್ರ ಮೋದಿಯವರ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಪ್ರಹ್ಲಾದ ಮೋದಿಯವರ  ಸಹಾಯಕ ಜಿತೇಂದ್ರ ತಿವಾರಿ ಅವರನ್ನು ಬುಧವಾರ ಬೆಳಿಗ್ಗೆ ಬಂಧಿಸಿದ್ದರು. ಪೋಸ್ಟರ್‌ಗಳಲ್ಲಿ ಗೃಹ ಸಚಿವ ಅಮಿತ್ ಶಾ  ಫೋಟೋಗಳೂ ಇದ್ದವು.

ಪ್ರಮುಖ ಸುದ್ದಿ :-   ಅಮೆರಿಕ ಮಾದರಿಯಲ್ಲಿ ಭಾರತದಲ್ಲೂ 50% ಉತ್ತರಾಧಿಕಾರ ತೆರಿಗೆ : ಸ್ಯಾಮ್ ಪಿತ್ರೊಡಾ ಹೇಳಿಕೆಯಿಂದ ವಿವಾದ ; ಬಿಜೆಪಿ ವಾಗ್ದಾಳಿ, ಇದು ನಮ್ಮ ಕಲ್ಪನೆಯಲ್ಲ ಎಂದ ಕಾಂಗ್ರೆಸ್

ಸುಲ್ತಾನ್‌ಪುರ ಎಸ್ಪಿ ಅರವಿಂದ ಚತುರ್ವೇದಿ ಅವರ ಪ್ರಕಾರ, ಜಿಲ್ಲೆಯಲ್ಲಿ ಎರಡು ಪೋಸ್ಟರ್ಗಳನ್ನು ಗುರುತಿಸಿದ ನಂತರ ‘ಪ್ರಧಮಂತಿ ಜನ ಕಲ್ಯಾಂಕರಿ ಯೋಜನೆ ಪ್ರಚಾರ್ ಪ್ರಸಾರ್ ಅಭಿಯಾನ್’ದ ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರ ಫೋಟೋಗಳನ್ನು ಬಳಸಲಾಗಿತ್ತು. ಆದರೆ ಇದಕ್ಕೆ ಅನುಮತಿ ಪಡೆದಿರಲಿಲ್ಲ. ಈ ಬಗ್ಗೆ ತನಿಖೆ ನಡೆಸಿದಾಗ   ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಇಂಥ ಕಾರ್ಯಕ್ರಮವಿರಲಿಲ್ಲ ಎಂದು ತಿಳಿದುಬಂತು. ಜೊತೆಗೆ,  ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಯಾವುದೇ ಯೋಜನೆ ಇಲ್ಲ ಎಂಬುದು ಗೊತ್ತಾಯಿತು. ಈ  ಮಾಹಿತಿಯ ಆಧಾರದ ಮೇಲೆ  ಎಲ್ಲಾ ಪೋಸ್ಟರ್‌ಗಳನ್ನು ನಗರದಿಂದ ತೆಗೆದುಹಾಕಲಾಯಿತು ಮತ್ತು ನಂತರ ಫೆಬ್ರವರಿ 4 ರಂದು ನಡೆಯಲಿರುವ ಈವೆಂಟ್‌ನ ಆಯೋಜಕರಾದ ಜಿತೇಂದ್ರ ತಿವಾರಿ ಅವರನ್ನು ಬಂಧಿಸಲಾಯಿತು.

ಈ ಕುರಿತು  ಜಿತೇಂದ್ರ ತಿವಾರಿ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ    ವಿರುದ್ಧ ಸರ್ಕಾರದ ಸ್ಥಳೀಯ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ದಾಖಲಿಸಿದ್ದಾರೆ.

ಕೋವಿಡ್‌   ಮಾರ್ಗಸೂಚಿಗೆ ಅನುಗುಣವಾಗಿ  ಸೆಕ್ಷನ್ 144 ರ ಅಡಿಯಲ್ಲಿ ನಿರ್ಬಂಧಗಳು ಇನ್ನೂ ಜಾರಿಯಲ್ಲಿರುವ ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಜಿತೇಂದ್ರ ತಿವಾರಿ ಯಾವುದೇ ಅನುಮತಿಯನ್ನು ಸಹ ಪಡೆದಿರಲಿಲ್ಲ. ಲಕ್ನೋದಲ್ಲಿ ‌ ಪ್ರಹ್ಲಾದ ಮೋದಿಯವರ  ಯಾವುದೇ ಸಹಚರರನ್ನು ಬಂಧಿಸಿಲ್ಲ  ಎಂದು ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement