ಎನ್‌ಸಿಪಿಗೆ ಬಿಜೆಪಿ ಶಾಸಕನ ೫ ಕೋಟಿ ರೂ. ದೇಣಿಗೆ !

ಮುಂಬೈ: ಶರದ್‌ ಪವಾರ್‌ ನೇತೃತ್ವದ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ) ೨೦೧೯-೨೦ನೇ ಸಾಲಿನಲ್ಲಿ ೫೯.೯೪ ಕೋಟಿ ರೂ. ಪಕ್ಷದ ದೇಣಿಗೆ ಸಂಗ್ರಹ ಮಾಡಿದ್ದು, ಕಳೆದ ವರ್ಷ ಪಕ್ಷ ಕೇವಲ ೧೨.೦೫ ಕೋಟಿ ರೂ. ದೇಣಿಗೆ ಸಂಗ್ರಹಿಸಿತ್ತು.

ಶಿವಸೇನಾ, ಕಾಂಗ್ರೆಸ್‌ ನೊಂದಿಗೆ ಮಹಾ ವಿಕಾಸ ಅಗಾಢಿ ಸರಕಾರ ನಡೆಸುತ್ತಿರುವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಹಣ ಹರಿದು ಬರುತ್ತಿದೆ. ಬಿಜೆಪಿ ಶಾಸಕ ಮಂಗಲ ಪ್ರಸಾದ ಲೋಧಾ ಎನ್‌ಸಿಪಿಗೆ ೫ ಕೋಟಿ ರೂ. ದೇಣಿಗೆ ನೀಡಿದ್ದು ವಿಶೇಷವಾಗಿದೆ. ೨೦೧೮-೧೯ಕ್ಕೆ ಹೋಲಿಕೆ ಮಾಡಿದರೆ ಪಕ್ಷಕ್ಕೆ ೫ ಪಟ್ಟು ಹೆಚ್ಚು ದೇಣಿಗೆ ಹರಿದು ಬಂದಿದೆ.

ಐದು ಅವಧಿಗೆ ಶಾಸಕರಾಗಿರುವ ಲೋಧಾ ಅವರನ್ನು ಎನ್‌ಸಿಪಿಗೆ  ೫ ಕೋಟಿ ದೇಣಿಗೆ ನೀಡಿದ ಕುರಿತು ಕೇಳಿದಾಗ, ಅವರು ನಾನು ನೇರವಾಗಿ ನನ್ನ ಉದ್ಯಮವನ್ನು ನೋಡಿಕೊಳ್ಳುವುದಿಲ್ಲ. ನನ್ನ  ಕಂಪನಿಯ ವ್ಯಕ್ತಿಗಳನ್ನು ಸಂಪರ್ಕಿಸುವುದು ಸೂಕ್ತ ಎಂದು ಉತ್ತರಿಸಿದರು.

ನಮ್ಮ ಪಕ್ಷ ಸ್ವೀಕರಿಸಿದ ದೇಣಿಗೆಯ ಮಾಹಿತಿಯನ್ನು ಪಾರದರ್ಶಕವಾಗಿ ಚುನಾವಣಾ ಆಯೋಗಕ್ಕೆ ತಿಳಿಸುತ್ತೇವೆ. ಸಂಶಯಕ್ಕೆ ಯಾವುದೇ ಕಾರಣವಿಲ್ಲ ಎಂದು ಪಕ್ಷದ ಮುಂಬೈ ಘಟಕದ ಅಧ್ಯಕ್ಷ ನವಾಬ್‌ ಮಲಿಕ್‌ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement