ಶರದ್ ಪವಾರ್ ಬಣಕ್ಕೆ ನೂತನ ಚಿಹ್ನೆ ಬಳಸಲು ಅನುಮತಿ ನೀಡಿದ ಸುಪ್ರೀಂ ಕೋರ್ಟ್‌

ನವದೆಹಲಿ :ಮುಂಬರುವ ಲೋಕಸಭೆ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗೆ ‘ರಾಷ್ಟ್ರೀಯವಾದಿ ಕಾಂಗ್ರೆಸ್ ಪಾರ್ಟಿ ಶರದ್ ಚಂದ್ರ ಪವಾರ್ ಬಣವು ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿತ್ರ ಒಳಗೊಂಡ ನೂತನ ಚಿಹ್ನೆಯನ್ನು ಬಳಸಲು ಇಂದು, ಮಂಗಳವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಶರದ್ ಪವಾರ್ ಬಣಕ್ಕೆ ತುತ್ತೂರಿ ಊದುತ್ತಿರುವ ವ್ಯಕ್ತಿಯ ಚಿತ್ರ ಒಳಗೊಂಡ ಚಿಹ್ನೆಯನ್ನು ಕಾಯ್ದಿರಿಸುವಂತೆ ಭಾರತೀಯ ಚುನಾವಣಾ … Continued

ಶರದ್ ಪವಾರಗೆ ದೊಡ್ಡ ಹಿನ್ನಡೆ..: ಅಜಿತ್ ಪವಾರ್ ನೇತೃತ್ವದ ಬಣವೇ ನಿಜವಾದ ಎನ್‌ಸಿಪಿ ಎಂದು ತೀರ್ಪು ಪ್ರಕಟಿಸಿದ ಚುನಾವಣಾ ಆಯೋಗ

ನವದೆಹಲಿ: ಮಂಗಳವಾರ ಚುನಾವಣಾ ಆಯೋಗವು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಣವನ್ನು “ನಿಜವಾದ” ಎನ್‌ಸಿಪಿ ಎಂದು ಪ್ರಕಟಿಸಿದ್ದು, ಪಕ್ಷದ ಸಂಸ್ಥಾಪಕ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ಅವರೊಂದಿಗಿನ ಬಣದ ನಡುವಿನ ವಿವಾದವನ್ನು ಕೊನೆಗೊಳಿಸಿದೆ. ಅಜಿತ್ ಪವಾರ್ ತನ್ನ ಚಿಕ್ಕಪ್ಪ ಮತ್ತು ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದ ಆಡಳಿತಾರೂಢ … Continued

ʼಭಗವಾನ್ ರಾಮನು ಮಾಂಸಾಹಾರಿ’ : ರಾಮ ಮಂದಿರ ಉದ್ಘಾಟನೆಗೆ ಮುನ್ನ ವಿವಾದ ಸೃಷ್ಟಿಸಿದ ಎನ್‌ಸಿಪಿ ನಾಯಕ ಜಿತೇಂದ್ರ ಅವ್ಹಾದ್ ಹೇಳಿಕೆ

ಮುಂಬೈ : ಅಯೋಧ್ಯೆಯಲ್ಲಿ ಬೃಹತ್ ರಾಮ ಮಂದಿರದ ಉದ್ಘಾಟನೆ ಸಮಾರಂಭ ನಡೆಯುವ ಕೆಲವು ದಿನಗಳ ಮೊದಲು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಜಿತೇಂದ್ರ ಅವ್ಹಾದ್ ಅವರು “ಭಗವಾನ್ ರಾಮನು ಮಾಂಸಾಹಾರಿ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಎನ್‌ಸಿಪಿಯ ಶರದ್ ಪವಾರ ಬಣಕ್ಕೆ ಸೇರಿದ ಜಿತೇಂದ್ರ ಅವ್ಹಾದ್ ಅವರು ಬುಧವಾರ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ … Continued

ಮಹಾರಾಷ್ಟ್ರ ಆಡಳಿತಾರೂಢ ಮೈತ್ರಿಕೂಟಕ್ಕೆ ನವಾಬ್ ಮಲಿಕ್ ಸೇರ್ಪಡೆ ವಿರೋಧಿಸಿ ಎನ್‌ ಸಿಪಿಯ ಅಜಿತ್ ಪವಾರಗೆ ಪತ್ರ ಬರೆದ ಫಡ್ನವೀಸ್‌

ಮುಂಬೈ : ಎನ್‌ಸಿಪಿ ಶಾಸಕ ನವಾಬ್ ಮಲಿಕ್ ಅವರನ್ನು ಮಹಾಯುತಿ ಸಮ್ಮಿಶ್ರ ಸರ್ಕಾರಕ್ಕೆ ಸೇರ್ಪಡೆಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್ ಅವರು ಮತ್ತೊಬ್ಬ ಉಪಮುಖ್ಯಮಂತ್ರಿ ಮತ್ತು ಮೈತ್ರಿಪಕ್ಷವಾದ ಎನ್‌ಸಿಪಿ ಅಜಿತ್ ಪವಾರ್ ಅವರಿಗೆ ಗುರುವಾರ ಪತ್ರ ಬರೆದಿದ್ದಾರೆ. ಜಾಮೀನಿನ ಮೇಲೆ ಹೊರಗಿರುವ ನವಾಬ್ ಮಲಿಕ್ ಮಹಾರಾಷ್ಟ್ರ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ … Continued

ಮಹಾರಾಷ್ಟ್ರ ಶಾಸಕರ ಅನರ್ಹತೆ ಪ್ರಕರಣ: ತೀರ್ಪು ನೀಡಲು ವಿಧಾನಸಭಾ ಸ್ಪೀಕರ್‌ ಗೆ ಗಡುವು ವಿಧಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಈ ಹಿಂದಿನ ಶಿವಸೇನೆ ಪಕ್ಷದ ಬಂಡಾಯ ಸದಸ್ಯರ ವಿರುದ್ಧದ ಅನರ್ಹತೆ ಪ್ರಕರಣದ ಕುರಿತಾದ ತೀರ್ಪನ್ನು ಈ ವರ್ಷದ ಡಿಸೆಂಬರ್ 31ರ ಒಳಗೆ ಮತ್ತು ಎನ್‌ಸಿಪಿ ಶಾಸಕರ ವಿರುದ್ಧ ಅನರ್ಹತೆಯನ್ನು 2024ರ ಜನವರಿ 24ರ ಒಳಗೆ ನೀಡುವಂತೆ ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್‌ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ … Continued

ವೀಡಿಯೊ..| ಎನ್‌ಸಿಪಿ ಶಾಸಕರ ಮನೆಗೆ ಬೆಂಕಿ ಹಚ್ಚಿದ ಮರಾಠಾ ಮೀಸಲಾತಿ ಪ್ರತಿಭಟನಾಕಾರರು

ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಶಾಸಕ ಪ್ರಕಾಶ ಸೋಲಂಕೆ ಅವರ ಮನೆಯನ್ನು ಮರಾಠಾ ಮೀಸಲಾತಿ ಚಳವಳಿಗಾರರು ಸೋಮವಾರ ಧ್ವಂಸಗೊಳಿಸಿದ್ದಾರೆ ಮತ್ತು ಬೆಂಕಿ ಹಚ್ಚಿದ್ದಾರೆ. ಅವರ ಮನೆಯಲ್ಲಿ ನಿಲ್ಲಿಸಿದ್ದ ಕಾರಿಗೂ ಬೆಂಕಿ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ದೃಶ್ಯಗಳು ಅವರ ಬಂಗಲೆಯಲ್ಲಿ ಭಾರಿ ಬೆಂಕಿ ಮತ್ತು ಅದರ … Continued

ರಾಷ್ಟ್ರೀಯ ಪಕ್ಷದ ಸ್ಥಾಮಾನ ಪಡೆದ ಎಎಪಿ : ಎನ್‌ಸಿಪಿ, ಸಿಪಿಐ, ಟಿಎಂಸಿಗೆ ಹಿನ್ನಡೆ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಚುನಾವಣಾ ಆಯೋಗ ಸೋಮವಾರ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ. ಶರದ್ ಪವಾರ್ ಅವರ ಶರದ್‌ ಪವಾರ್‌ ಎನ್‌ಸಿಪಿ, ಸಿಪಿಐ ಮತ್ತು ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪಕ್ಷಗಳ ಸ್ಥಾನಮಾನ ಕಳೆದುಕೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಪಕ್ಷದ ಸ್ಥಾನಮಾನಕ್ಕೆ ಸಂಬಂಧಿಸಿದಂತೆ ಏಪ್ರಿಲ್ … Continued

ರಾಷ್ಟ್ರಪತಿ ಚುನಾವಣೆ: ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಕಾಂಗ್ರೆಸ್-ಎಸ್‌ಪಿ-ಎನ್‌ಸಿಪಿ ಶಾಸಕರಿಂದ ಅಡ್ಡ ಮತದಾನ…!?

ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಪರವಾಗಿ ಅಡ್ಡ ಮತದಾನವು ಕಾಂಗ್ರೆಸ್ ಮತ್ತು ಎನ್‌ಸಿಪಿ ಎರಡರಿಂದಲೂ ನಡೆದ ಬಗ್ಗೆ ವರದಿಯಾಗಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಪಾಳಯ, ಗುಜರಾತ್‌ನಲ್ಲಿ ಎನ್‌ಸಿಪಿ ಮತ್ತು ಒಡಿಶಾ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್‌ನಿಂದ ಅಡ್ಡ ಮತದಾನ ವರದಿಯಾಗಿದೆ. ಉತ್ತರ ಪ್ರದೇಶ ಬರೇಲಿಯ ಭೋಜಿಪುರದ ಸಮಾಜವಾದಿ ಪಕ್ಷದ ಶಾಸಕರಾದ … Continued

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್‌ಗೆ ಅನಾರೋಗ್ಯ, ಮಾ.೩೧ರಂದು ಶಸ್ತ್ರ ಚಿಕಿತ್ಸೆ

ಮುಂಬೈ: ಎನ್‌ಸಿಪಿ ಸಂಸ್ಥಾಪಕ ಶರದ್ ಪವಾರ್ ಆರೋಗ್ಯ ಹದಗೆಟ್ಟಿದೆ ಎಂದು ಪಕ್ಷದ ಮೂಲಗಳು ಮಾಹಿತಿ ನೀಡಿವೆ. ಅವರ ಪಿತ್ತಕೋಶದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದೆ. ಭಾನುವಾರ ಸಂಜೆಯಿಂದ ಶರದ್ ಪವಾರ್ ಅವರ ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದ್ದು, ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದರು. ಅವರ ಪಿತ್ತಕೋಶದಲ್ಲಿ ಕಲ್ಲುಗಳು ಇರುವುದನ್ನು ವೈದ್ಯರು ಪತ್ತೆಹಚ್ಚಿದ್ದಾರೆ. ಹೀಗಾಗಿ ಮುಂದಿನ ಅವರ ಎಲ್ಲ … Continued

ಗೃಹ ಸಚಿವ ದೇಶ್ಮುಖ್‌ ವಿರುದ್ಧ ಆರೋಪ ಗಂಭೀರ ಸ್ವರೂಪದ್ದು:ಶರದ್‌ ಪವಾರ್‌

ಮುಂಬೈ; ರಾಷ್ಟ್ರೀಯ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಾಗಿ ಪರಿಣಮಿಸುತ್ತಿದ್ದಾರೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಕಳಂಕಿತ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಗೃಹ ಸಚಿವ ಅನಿಲ ದೇಶ್ಮುಖ್ ‌ ಹಣ ಸುಲಿಗೆ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದಕ್ಕೆ … Continued