ಉಡುಪಿಯಲ್ಲಿ ೧೨ನೇ ಶತಮಾನದ ವಿಷ್ಣು ಮೂರ್ತಿ ಪತ್ತೆ

ಉಡುಪಿ: ಜಿಲ್ಲೆಯ ಶಿರ್ವಾದಲ್ಲಿ ೧೨ನೇ ಶತಮಾನದ ವಿಷ್ಣುವಿನ ವಿಗ್ರಹ ಪತ್ತೆಯಾಗಿದ್ದು, ಎಂಎಸ್‌ಆರ್‌ಎಸ್‌ ಕಾಲೇಜಿನ ಪ್ರಾಚ್ಯ ಇತಿಹಾಸ ಹಾಗೂ ಪುರಾತತ್ವ ವಿಭಾಗ ಹರಿಯ ಮೂರ್ತಿಯನ್ನು ಪತ್ತೆ ಮಾಡಿದೆ.

ಇಲ್ಲಿನ ಪಂಚಾಯತ ಕಚೇರಿಯ ಹಿಂದೆ ಹಳೆಯ ದೇವಸ್ಥಾನದ ಸಮೀಪ ಉತ್ಖನನ ಮಾಡುತ್ತಿದ್ದ ಸಂದರ್ಭದಲ್ಲಿ ೨೦ ಅಡಿ ಆಳದಲ್ಲಿ ಸುಂದರ ವಿಷ್ಣು ಮೂರ್ತಿ ಪತ್ತೆಯಾಗಿದೆ. ಮೂರ್ತಿ ಕಾರಂದ ಮುಕುಟ, ಮಕರ ಕುಂಡಲ, ತೋಳುಬಂದಿ, ಕೌಸ್ತುಭ ಹಾರ ಹೊಂದಿದೆ. ಶಂಖಧಾರಿ ವಿಷ್ಣು ಮೂರ್ತಿ ಇದಾಗಿದೆ. ಮೂರ್ತಿಯ ಬಲಗೈ ಪತ್ತೆ ಮಾಡಲು ಉತ್ಖನನ ಮುಂದುವರೆದಿದೆ. ಇದು ಮಾಧ್ವ ಪೂರ್ವ ಕಾಲದ ಮೂರ್ತಿಯಾಗಿದ್ದು, ಕರಾವಳಿ ಕರ್ನಾಟಕದ ಭಾಗವತ ಸಂಪ್ರದಾಯ ಸಾರುವ ಆಕರ್ಷಕ ವಿಗ್ರಹ ಇದಾಗಿದೆ ಎಂದು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿ: ಸರ್ಕಾರದ ಆದೇಶ

ನಿಮ್ಮ ಕಾಮೆಂಟ್ ಬರೆಯಿರಿ

advertisement