ಬರಹಗಾರ ಪ್ರೊ. ಭಗವಾನ್‌ ಮುಖಕ್ಕೆ ಕಪ್ಪು ಮಸಿ ಬಳಿದ ವಕೀಲೆ

ಬೆಂಗಳೂರು: ಬರಹಗಾರ ಪ್ರೊ. ಕೆ. ಎಸ್. ಭಗವಾನ್ ಅವರ ಮುಖಕ್ಕೆ ವಕೀಲೆಯೊಬ್ಬರು ಕಪ್ಪು ಮಸಿ ಬಳಿದ ಘಟನೆ ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಗುರುವಾರ ನಡೆದಿದೆ.
ವಕೀಲಾರದ ಮೀರಾ ರಾಘವೇಂದ್ರ ಎಂಬುವವರು ಭಗವಾನ್‌ ಅವರು ಹಿಂದೂ ದೇವರನ್ನು ಅವಮಾನಿಸುತ್ತಿರುವುದನ್ನು ಖಂಡಿಸಿ ಕೋರ್ಟ್‌ ಆವರಣದಲ್ಲಿಯೇ ಭಗವಾನ್‌ ಅವರ ಮುಖಕ್ಕೆ ಕಪ್ಪು ಮಸಿ ಬಳಿದಿದ್ದಾರೆ.
ಹಿಂದೂ ಧರ್ಮದ ಕಟು ಟೀಕಾಕಾರರಾಗಿರುವ ಪ್ರೊ. ಭಗವಾನ್ ಪ್ರಕಣದ ಸಂಬಂಧ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ನ್ಯಾಯಾಲಯಕ್ಕೆ ಆಗಮಿಸಿದ್ದರು, ಪ್ರಕರಣದ ವಿಚಾರಣೆಗೆ ಬಂದಿದ್ದ ಅವರು ಜಾಮೀನು ಪಡೆದು ಅವರು ಹೊರಗೆ ಬರುತ್ತಿರುವಾಗ ಈ ಘಟನೆ ನಡೆಯಿತು.ಭಗವಾನ್‌ ಶ್ರೀರಾಮನನ್ನು ಪ್ರೊ. ಭಗವಾನರು ಅವಹೇಳನ ಮಾಡಿದ್ದರಿಂದ ತಾವು ಕುಪಿತಗೊಂಡು ಈ ರೀತಿ ಮಾಡಿದ್ದೇನೆ ಎಂದು ಹೇಳಿರುವ ಮೀರಾ ರಾಘವೇಂದ್ರ ಭಗವಾನ್‌ ಅವರಿಗೆ ತಾವು ಮಸಿ ಬಳಿದ ವಿಡಿಯೋವನ್ನು ತಮ್ಮ ಸಾಮಾಜಿ ಮಾಧ್ಯಮ ಪ್ರೊಫೈಲ್‌ನಲ್ಲಿ ತಾವೇ ಅಪ್‌ಲೋಡ್‌ ಮಾಡಿ ಜೈ ಶ್ರೀರಾಮ ಎಂದು ಬರೆದಿದ್ದು ಈಗ ವೈರಲ್‌ ಆಗಿದೆ.
ನ್ಯಾಯಾಲಯದಿಂದ ಹೊರ ಬರುತ್ತಿರುವಾಗ ಮೀರಾ ಅವರು ಭಗವಾನ್‌ ಅವರ ಮುಖಕ್ಕೆ ಮಸಿ ಬಳಿದ ಮೀರಾ, “ಈ ವಯಸ್ಸಿನಲ್ಲಿ ದೇವರ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ತಕ್ಷಣವೇ ಭಗವಾನ್ ಅವರ ಅಂಗರಕ್ಷಕ ಅವರನ್ನು ನ್ಯಾಯಾಲಯದ ಆವರಣದಿಂದ ಹೊರಗೆ ಕರೆದೊಯ್ದ.

ಪ್ರಮುಖ ಸುದ್ದಿ :-   ಗಡಿನಾಡ ಚೇತನ ರಾಜ್ಯ ಪ್ರಶಸ್ತಿಗೆ ಸಾಹಿತಿ-ರಂಗಕರ್ಮಿ ಬೆಳಗಾವಿಯ ಪ್ರೊ.ಬಿ.ಎಸ್.ಗವಿಮಠ ಸೇರಿ ಮೂವರು ಆಯ್ಕೆ

ಹುಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಗವಾನ್‌ ದೂರು ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಆದವರ ಪಟ್ಟಿಯಲ್ಲಿ ಭಗವಾನ್ ಅವರ ಹೆಸರೂ ಇದೆ ಎಂಬುದು ತಿಳಿದ ನಂತರ ನಂತರ ಸರ್ಕಾರ ಭಗವಾನ್‌ ಅವರಿಗೆ ಪೊಲೀಸ್ ಭದ್ರತೆ ಒದಗಿಸಿತ್ತು.
ಈ ಮೊದಲು 2017 ರಲ್ಲಿ ಮತ್ತೊಬ್ಬ ಬರಹಗಾರ ಯೋಗೇಶ್ ಮಾಸ್ಟರ್‌ಗೆ ಭಗವಾನ್‌ ಗಣೇಶನ ಬಗ್ಗೆ ಟೀಕೆ-ಟಿಪ್ಪಣಿ ಮಾಡಿದ್ದಕ್ಕೆ ಅವರಿಗೂ ಮಸಿ ಬಳಿಯಲಾಗಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement