ಬೇರೆ ಪಕ್ಷದಿಂದ ಬಂದು ಸಿಎಂ ಆಗಬಹುದು, ನಾವು ಮಂತ್ರಿಯಾಗೋದು ತಪ್ಪಾ..?

posted in: ರಾಜ್ಯ | 0

ಬೆಂಗಳೂರು: ಬೇರೆ ಬೇರೆ ಪಕ್ಷದಿಂದ ಬಂದು ಮುಖ್ಯಮಂತ್ರಿಗಳೇ ಆಗಿರುವಾಗ, ನಾವು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಮಂತ್ರಿ ಆದರೆ ತಪ್ಪೇನು ಎಂದು ಗುರುವಾರ ಸಚಿವ ಎಂಟಿಬಿ ನಾಗರಾಜು ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಸಂದರ್ಭದಲ್ಲಿ ಜೆಡಿಎಸ್‌ನ ಬಂಡೆಪ್ಪಕಾಶಂಪುರ ಮಾತನಾಡುತ್ತ ಕಾಂಗ್ರೆಸ್-ಜೆಡಿಎಸ್‌ನಿಂದ ಬಂದವರಿಂದ ಈ ಸರ್ಕಾರ ಆಗಿದೆ ಎಂದು ತಿವಿದರು. ಆಗ ತಕ್ಷಣವೇ ಎದ್ದು ನಿಂತ ಎಂಟಿಬಿ ನಾಗರಾಜು, ಎಸ್.ಟಿ ಸೋಮಶೇಖರ್, ಬೈರತಿ ಬಸವರಾಜು ಪದೇ ಪದೇ ಈ ವಿಷಯ ಪ್ರಸ್ತಾಪಿಸುತ್ತೀರಿ. ಇದು ಸರಿಯಲ್ಲ. ಬೇರೆ ಬೇರೆ ಪಕ್ಷದಿಂದ ಬಂದು ಮುಖ್ಯಮಂತ್ರಿಗಳೇ ಆಗಿರುವಾಗ, ನಾವು ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಮಂತ್ರಿ ಆದರೆ ತಪ್ಪೇನು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರಿಗೆ ಟಾಂಗ್‌ ನೀಡಿದರು.
ನಾವೇನು ಖರೀದಿಯಾಗಿಲ್ಲ. ಬೇರೆ ಪಕ್ಷದಿಂದ ಬಂದವರು ಮುಖ್ಯಮಂತ್ರಿ ಆಗಿಲ್ಲವೆ? ನಾವು ಆದರೆ ತಪ್ಪೇನು ಎಂದು ಎಂಟಬಿ ನಾಗರಾಜು ಸಿಟ್ಟಿನಿಂದ ಹೇಳಿದಾಗ, ಬಂಡೆಪ್ಪ ಕಾಶಂಪೂರ್, ನೀವು ಖರೀದಿಯಾಗಿದ್ದೀರಿ ಎಂದು ಹೇಳಿಲ್ಲ. ನೀವು ಬೇರೆ ಪಕ್ಷದಿಂದ ಬಂದಿದ್ದರಿಂದ ಸರ್ಕಾರ ಆಗಿದೆ ಎಂದಷ್ಟೇ ಹೇಳಿದ್ದು ಎಂದಾಗ, ಸಿಟ್ಟಿನಿಂದ ಕುದಿಯುತ್ತಿದ್ದ ನಾಗರಾಜು, ನೀವು ಹೇಳಿಲ್ಲರೀ ಸಿದ್ಧರಾಮಯ್ಯ ನಾವೆಲ್ಲ ಖರೀದಿಯಾಗಿದ್ದೇವೆ ಎಂದು ಹೇಳಿಲ್ಲವೇ? ಅವರು ಬೇರೆ ಪಕ್ಷದಿಂದ ಬಂದು ಮುಖ್ಯಮಂತ್ರಿ ಆಗಲಿಲ್ಲವಾ ಎಂದು ಖಾರವಾಗಿ ಹೇಳಿದರು.
ಆಗ ಬಂಡೆಪ್ಪ ಕಾಶಂಪುರ, ನಾನಂತೂ ಹಾಗೆ ಹೇಳಿಲ್ಲ ನಾನು ಒಳ್ಳೆಯ ಸರ್ಕಾರ ಆಗಬೇಕೆಂಬ ದೃಷ್ಟಿಯಿಂದ ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಚಾಮರಾಜನಗರ: ಲಘು ವಿಮಾನ ಪತನ; ಪೈಲಟ್‌ಗಳು ಪಾರು

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement