ಮುಂಬೈ: ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಮೆಹುಲ್ ಚೋಕ್ಸಿಗೆ ಸೇರಿದ ಗೀತಾಂಜಲಿ ಗ್ರೂಪ್‌ನ 14.45 ಕೋಟಿ ರೂ.ಗಳ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಅಟ್ಯಾಚ್ ಮಾಡಿದೆ.
ದೇಶದಿಂದ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ ಸೋದರಳಿಯ ನೀರವ್ ಮೋದಿಯವರೊಂದಿಗೆ ಸೇರಿ 15,600 ಕೋಟಿ ರೂ.ಗಳ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂಬೈನ ಚೋಕ್ಸಿಯ ಸ್ಥಿರಾಸ್ತಿ ಮತ್ತು ಚಿನ್ನ ಮತ್ತು ಪ್ಲಾಟಿನಂ ಆಭರಣಗಳು, ವಜ್ರಗಳು, ಐಷಾರಾಮಿ ಕೈಗಡಿಯಾರಗಳು ಮತ್ತು ಗೀತಾಂಜಲಿ ಗ್ರೂಪ್ ಹೆಸರಿನಲ್ಲಿರುವ ಮರ್ಸಿಡಿಸ್ ಬೆಂಜ್ ಕಾರಿನ ರೂಪದಲ್ಲಿ ಚರಾಸ್ತಿಗಳನ್ನು ಲಗತ್ತಸಲಾಗಿದೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
2018 ರ ಆರಂಭದಲ್ಲಿ ಪಿಎನ್‌ಬಿ ಹಗರಣ ಬೆಳಕಿಗೆ ಬಂದ ನಂತರ ಚೋಕ್ಸಿ ಮತ್ತು ಮೋದಿ ಇಬ್ಬರೂ ಭಾರತದಿಂದ ಪಲಾಯನ ಮಾಡಿದ್ದಾರೆ. ಚೋಕ್ಸಿ ಆಂಟಿಗುವಾದಲ್ಲಿದ್ದಾರೆ ಎಂದು ಹೇಳಲಾಗಿದೆ. ನೀರವ್ ಮೋದಿಯನ್ನು ಬ್ರಿಟಿಷ್ ಜೈಲಿನಲ್ಲಿ ಇರಿಸಲಾಗಿದೆ ಮತ್ತು ಭಾರತ ತನಗೆ ಹಸ್ತಾಂತರ ಮಾಡುವಂತೆ ಕೋರಿದೆ. ಚೋಕ್ಸಿ ಮತ್ತು ಮೋದಿಯವರ ಮಾಡಿರುವ ಹಗರಣವನ್ನು ಕೇಂದ್ರ ತನಿಖಾ ದಳ (ಸಿಬಿಐ), ಇಡಿ ಮತ್ತು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ಮೂರು ಏಜೆನಸಿಗಳು ತನಿಖೆ ನಡೆಸುತ್ತಿವೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ