ಮಂಡ್ಯ ಜಿಲ್ಲೆಯಲ್ಲಿ ಲಿಥಿಯಂ ನಿಕ್ಷೇಪ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ 1,600 ಟನ್‌ಗಳಷ್ಟು ಲಿಥಿಯಂ ನಿಕ್ಷೇಪ ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಕೇಂದ್ರ ಸರಕಾರ  ಲೋಕಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದೆ.

ಪರಮಾಣು ಇಂಧನ ಇಲಾಖೆಯ ಘಟಕ  ಅಟಾಮಿಕ್ ಮಿನರಲ್ಸ್ ಡೈರೆಕ್ಟರೇಟ್ ಫಾರ್ ಎಕ್ಸ್‌ಪ್ಲೋರೇಶನ್ ಅಂಡ್ ರಿಸರ್ಚ್ (ಎಎಮ್‌ಡಿ) ಮಾರ್ಲಗಲ್ – ಅಲಪಟ್ಟಣ ಪ್ರದೇಶದ ಪೆಗ್‌ಮ್ಯಾಟೈಟ್‌ಗಳಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

ಹೊಸ ತಂತ್ರಜ್ಞಾನಗಳಲ್ಲಿ ಲಿಥಿಯಂ ಒಂದು ಪ್ರಮುಖ ಅಂಶವಾಗಿದ್ದು, ಪಿಂಗಾಣಿ, ಗಾಜು, ದೂರಸಂಪರ್ಕ ಮತ್ತು ಏರೋಸ್ಪೇಸ್ ಉದ್ಯಮಗಳಲ್ಲಿ ಇದನ್ನು ಬಳಕೆ ಮಾಡಲಾಗುತ್ತದೆ.

ಅಯಾನ್ ಬ್ಯಾಟರಿಗಳು,  ಗ್ರೀಸ್, ರಾಕೆಟ್ ಪ್ರೊಪೆಲ್ಲೆಂಟ್‌ಗಳಿಗೆ ಹೆಚ್ಚಿನ ಶಕ್ತಿಯ ಸೇರ್ಪಡೆಗಳು, ಮೊಬೈಲ್ ಫೋನ್‌ಗಳಿಗೆ ಆಪ್ಟಿಕಲ್ ಮಾಡ್ಯುಲೇಟರ್‌ಗಳು ಮತ್ತು ಥರ್ಮೋನ್ಯೂಕ್ಲಿಯರ್ ಗಳಿಗೆ ಲಿಥಿಯಂ ಹೆಚ್ಚಾಗಿ ಬಳಕೆಯಾಗುತ್ತದೆ. ಲಿಥಿಯಂ ಅಯಾನ್ ಬ್ಯಾಟರಿಗಳ ಬೇಡಿಕೆಯ ನಿರಂತರ ಹೆಚ್ಚಳದಿಂದಾಗಿ, ಕಳೆದ ಕೆಲವು ವರ್ಷಗಳಿಂದ ಲಿಥಿಯಂ ಬೇಡಿಕೆ ಹೆಚ್ಚಾಗಿದೆ.

ಈ ಪ್ರದೇಶದಲ್ಲಿ ಪರಿಶೋಧನೆ ಪೂರ್ಣಗೊಂಡ ನಂತರವೇ ಮಾರ್ಲಗಲ್ – ಅಲಪಟ್ಟಣ ಪ್ರದೇಶದಲ್ಲಿ ಲಿಥಿಯಂ ದೊರೆಯುವ ಪ್ರಮಾಣದ ಮಾಹಿತಿ ಸಿಗಲಿದೆ.ಇಲ್ಲಿನ ಸಾಮಾಜಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ಅಧ್ಯಯನಗಳ ನಂತರ ಲಿಥಿಯಂ ನಿಕ್ಷೇಪಗಳ ವಾಣಿಜ್ಯ ಬಳಕೆ ಯೋಜನೆಗಳನ್ನು ಪ್ರಾರಂಭಿಸಬಹುದು ಎಂದು ಮಾಹಿತಿ ನೀಡಿದೆ.

ಪ್ರಮುಖ ಸುದ್ದಿ :-   ಮಳೆ : ನಾಳೆ (ಜು.24) ಬೆಳಗಾವಿ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement