ರೈತರ ಭೇಟಿಗೆ ತೆರಳಿದ ವಿಪಕ್ಷಗಳ ಸಂಸದರ ತಡೆದ ಪೊಲೀಸರು

 

ರೈತರ ಭೇಟಿಗೆ ತೆರಳಿದ ವಿಪಕ್ಷಗಳ ಸಂಸದರ ತಡೆದ ಪೊಲೀಸರು
ನವ ದೆಹಲಿ: ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಭೇಟಿಯಾಗಲು ಅಕಾಲಿ ದಳ, ಡಿಎಂಕೆ, ಎನ್‌ಸಿಪಿ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ 10 ವಿರೋಧ ಪಕ್ಷಗಳ ೧೭ ಸಂಸದರನ್ನು ಘಾಜಿಪುರ ಗಡಿಯನ್ನು ತಲುಪದಂತೆ ಗುರುವಾರ ಪೊಲೀಸರು ತಡೆದರು.
ಪ್ರತಿಭಟನಾ ನಿರತ ರೈತರ ಭೇಟಿಯನ್ನು ಸಂಘಟಿಸಿದ ಅಕಾಲಿ ದಳ ಸಂಸದರಾದ ಹರ್ಸಿಮ್ರತ್ ಕೌರ್ ಬಾದಲ್, ಪೊಲೀಸರು ಬ್ಯಾರಿಕೇಡ್‌ಗಳನ್ನು ದಾಟಿ ಪ್ರತಿಭಟನಾ ಸ್ಥಳ ತಲುಪಲು ನಾಯಕರಿಗೆ ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.
ಎನ್‌ಸಿಪಿಯಿಂದ ಸುಪ್ರಿಯಾ ಸುಳೆ, ಡಿಎಂಕೆ ಯಿಂದ ಕನಿಮೋಜಿ ಮತ್ತು ತಿರುಚಿ ಶಿವ, ತೃಣಮೂಲ ಕಾಂಗ್ರೆಸ್‌ನಿಂದ ಸೌಗತಾ ರಾಯ್ ನಿಯೋಗದಲ್ಲಿದ್ದರು. ಆರ್‌ಎಸ್‌ಪಿ ಮತ್ತು ಐಯುಎಂಎಲ್ ಸಹ ಇದ್ದರಲ್ಲಿದ್ದರು.

ಬುಧವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ ಹಲವಾರು ವಿರೋಧ ಪಕ್ಷಗಳು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಪ್ರತಿಷ್ಠೆಯ ವಿಷಯವಾಗಿಸದೆ ಹಿಂತೆಗೆದುಕೊಳ್ಳಬೇಕು ಮತ್ತು ಆಂದೋಲನ ನಡೆಸುತ್ತಿರುವ ರೈತರನ್ನು “ಶತ್ರುಗಳಂತೆ ಪರಿಗಣಿಸದೆ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದ್ದವು.
ದೆಹಲಿ-ಉತ್ತರ ಪ್ರದೇಶ ಗಡಿಯಲ್ಲಿರುವ ಗಾಜಿಪುರದಲ್ಲಿ ಕಟ್ಟುನಿಟ್ಟಿನ ಭದ್ರತೆ ಮುಂದುವರೆದಿದೆ, ಕಳೆದ ಸೆಪ್ಟೆಂಬರ್‌ನಲ್ಲಿ ಜಾರಿಗೆ ತಂದ ಹೊಸ ಕೃಷಿ ಮಾರುಕಟ್ಟೆ ಕಾನೂನುಗಳನ್ನು ಕೇಂದ್ರವು ರದ್ದುಪಡಿಸಬೇಕು ಎಂಬ ಬೇಡಿಕೆಯೊಂದಿಗೆ ಸಾವಿರಾರು ರೈತರು ಕ್ಯಾಂಪ್ ಮಾಡುತ್ತಿರುವ ಪ್ರಮುಖ ಪ್ರತಿಭಟನಾ ಸ್ಥಳಗಳಲ್ಲಿ ಇದು ಸಹ ಒಂದು.

ಪ್ರಮುಖ ಸುದ್ದಿ :-   ಪವಿತ್ರಗೌಡ ನಟ ದರ್ಶನ್ ಪತ್ನಿ ಅಲ್ಲ ; ವಕೀಲರ ಸ್ಪಷ್ಪನೆ

ಪ್ರತಿಭಟನಾ ನಿರತ ರೈತರು ಈ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ಕಿತ್ತುಹಾಕಲು ದಾರಿ ಮಾಡಿಕೊಡುತ್ತವೆ ಎಂಬ ಆತಂಕ ವ್ಯಕ್ತಪಡಿಸಿವೆ. ಹೊಸ ಕೃಷಿ ಕಾನೂನುಗಳು ರೈತರಿಗೆ ಉತ್ತಮ ಅನುಕೂಲ ತರುತ್ತವೆ ಮತ್ತು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುತ್ತವೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement