ಬೆಂಗಳೂರು: ಹಲವು ತಿಂಗಳುಗಳ ಹಿಂದೆ ದಾಳಿಗೊಳಗಾಗಿದ್ದ ತೈವಾನ್ ಕಂಪನಿ ವಿಸ್ಟ್ರಾನ್ ಇನ್ನೊಂದು ವಾರದಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಿದೆ.
ಕಾರ್ಖಾನೆ ಆರಂಭಿಸಲು ವಿಸ್ಟ್ರಾನ್ ಸರಕಾರದಿಂದ ಅಗತ್ಯ ಅನುಮತಿ ಪಡೆದುಕೊಂಡಿದ್ದು, ಇನ್ನೊಂದು ವಾರದಲ್ಲಿ ಉತ್ಪಾದನೆ ಆರಂಭಿಸುವುದು. ಡಿಸೆಂಬರ್ ೧೨ರಂದು ಗುತ್ತಿಗೆ ಕಾರ್ಮಿಕರ ಪ್ರತಿಭಟನೆ ಉಗ್ರ ರೂಪ ತಳೆದಿದ್ದರಿಂದ ಕೋಲಾರ ಜಿಲ್ಲೆ ನಾರಾಯಣಪುರದಲ್ಲಿರುವ ಕಾರ್ಖಾನೆಯಲ್ಲಿ ಸುಮಾರು ೫೨ ಕೋಟಿ ರೂ. ಮೊತ್ತದ ಆಸ್ತಿ ಹಾನಿಯಾಗಿತ್ತು.
೧೨ ಗಂಟೆಗಳ ಶಿಫ್ಟ್, ವಿವರ ನೀಡದೇ ವೇತನ ಕಡಿತ ಖಂಡಿಸಿ ಪ್ರತಿಭಟನೆ ನಡೆಸಿದ್ದರು. ನಂತರ ನಡೆಸಲಾದ ತನಿಖೆಯಲ್ಲಿ ಕಂಪನಿ ಕೆಲ ಕಾಯ್ದೆ ಉಲ್ಲಂಘನೆ ಮಾಡಿದ್ದು ಕಂಡು ಬಂದಿತ್ತು. ಕಾರ್ಮಿಕರ ದಾಳಿಯ ನಂತರ ಕಾರ್ಖಾನೆ ಲೈಸೆನ್ಸ್ ನವೀಕರಿಸಿಕೊಂಡಿತು.
ಕಾಯ್ದೆ ಉಲ್ಲಂಘನೆ ಹಾಗೂ ಆಂತರಿಕ ತನಿಖೆಯಲ್ಲಿ ವಿಫಲಗೊಂಡ ಹಿನ್ನೆಲೆಯಲ್ಲಿ ಆಪಲ್ ಕಂಪನಿ ವಿಸ್ಟ್ರಾನ್‌ಗೆ ಹೊಸ ವ್ಯವಹಾರ ನೀಡಲು ನಿರಾಕರಿಸಿದೆ.
ಕಾರ್ಖಾನೆಯ ಆವರಣದಲ್ಲಿ ನಡೆದ ಹಿಂಸಾಕೃತ್ಯದ ನಂತರ ೧೫ ದಿನಗಳೊಳಗೆ ಕಾರ್ಖಾನೆ ಪುನರಾರಂಭ ಮಾಡುವಂತೆ ರಾಜ್ಯ ಸರಕಾರ ಭರವಸೆ ನೀಡಿದರೂ ಕಂಪನಿ ಈವರೆಗೆ ಕಾರ್ಯಾರಂಭ ಮಾಡಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ