ನವದೆಹಲಿ: ಮತಬ್ಯಾಂಕ್ ಕೇಂದ್ರಿಕರಿಸಿ ಬಜೆಟ್ ಮಾಡುತ್ತಿದ್ದ ಹಿಂದಿನ ಸರಕಾರಗಳು ಆಯವ್ಯಯವನ್ನು ಈಡೇರಿಸದೇ ಘೋಷಣೆಯ ಮಾಧ್ಯಮವಾಗಿಸಿಕೊಂಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಹಿಂದಿನ ಸರಕಾರಗಳನ್ನು ಟೀಕಿಸಿದ್ದಾರೆ,
advertisement
ದಶಕಗಳಿಂದ ಬಜೆಟ್‌ನಲ್ಲಿ ಯಾರ ಹೆಸರಿನಲ್ಲಿ ಯಾವ ಘೋಷಣೆಯಾಗಿದೆ ಎಂಬುದಕ್ಕೆ ಆಯವ್ಯಯ ಸೀಮಿತವಾಗುತ್ತಿತ್ತು. ಇದು ಮತಬ್ಯಾಂಕ್‌ಗೆ ಪೂರಕ ಘೋಷಣೆಯಂತಿತ್ತು, ಹಿಂದೆ ಬಜೆಟ್ ಪೂರ್ಣವಾಗಿ ಜಾರಿಗೆ ಬರುವಂತಿರಲಿಲ್ಲ. ನಾವೆಲ್ಲ ಪ್ರಸಕ್ತ ಅವಶ್ಯಕತೆಗಳು ಹಾಗೂ ಭವಿಷ್ಯದ ಜವಾಬ್ದರಿಗಳನ್ನು ಗಮನದಲ್ಲಿಟ್ಟುಕೊಂಡು ಮನೆಯ ಖರ್ಚಿನ ಲೆಕ್ಕ-ಪತ್ರ ಮಾಡುತ್ತೇವೆ. ಆದರೆ ಹಿಂದಿನ ಸರಕಾರಗಳು ಬಜೆಟ್ ಅನ್ನು ಪ್ರಚಾರದ ಮಾಧ್ಯಮವಾಗಿಸಿಕೊಂಡಿದ್ದವು. ಆದರೆ ಈಗ ದೇಶ ಇಂಥ ವಿಚಾರಗಳನ್ನು ಹಾಗೂ ವಿಧಾನಗಳನ್ನು ಬದಲಾಯಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ | |
ವಾಟ್ಸಾಪ್ ಗ್ರೂಪ್ ಸೇರಿ | |
ಫೇಸ್ ಬುಕ್ ಫಾಲೋ ಮಾಡಿ | |
ಗೂಗಲ್ ನ್ಯೂಸ್ ನಲ್ಲಿ ಸೇರಿ | |
ಟ್ವಿಟರ್ ನಲ್ಲಿ ಫಾಲೋ ಮಾಡಿ |
ನಿಮ್ಮ ಕಾಮೆಂಟ್ ಬರೆಯಿರಿ