ನಿಮ್ಹಾನ್ಸ್‌ನಲ್ಲಿ ಮರೆವಿನ ಕಾಯಿಲೆ ಚಿಕಿತ್ಸಾ ಕೇಂದ್ರ

ಬೆಂಗಳೂರು: ಇಲ್ಲಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಆಂಡ್‌ ನ್ಯೂರೋ ಸಾಯನ್ಸ್‌ (ನಿಮ್ಹಾನ್ಸ್)‌ ನಲ್ಲಿ ಮೊದಲ ಮರೆವಿನ ಕಾಯಿಲೆ ಚಿಕಿತ್ಸಾ ಕೇಂದ್ರ ಆರಂಭವಾಗಲಿದೆ.
ಇಲ್ಲಿನ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದ ಕ್ಯಾಂಪಸ್‌ನಲ್ಲಿ ನೂತನ ಕೇಂದ್ರ ಆರಂಭಗೊಳ್ಳುವುದು. ಕೇಂದ್ರ ನಿರ್ಮಾಣಗೊಳ್ಳಲು ಕನಿಷ್ಟ ೧೮ ತಿಂಗಳುಗಳ ಅವಶ್ಯಕತೆಯಿದೆ ಎಂದು ಮನೋವೈದ್ಯಶಾಸ್ತ್ರ ಪ್ರಾಧ್ಯಾಪಕ ಡಾ. ಪಿ.ಟಿ.ಶಿವಕುಮಾರ ತಿಳಿಸಿದ್ದಾರೆ.
ವಸತಿ ಕೇಂದ್ರವು ಬುದ್ಧಿಮಾಂದ್ಯತೆ ಮತ್ತು ಇತರ ದೀರ್ಘಕಾಲದ ನರ-ಮನೋವೈದ್ಯಕೀಯ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಆರೈಕೆ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು.

ಬುದ್ಧಿಮಾಂದ್ಯತೆಯು ಮೆದುಳಿನಲ್ಲಿನ ನ್ಯೂರಾನ್‌ಗಳ ಹಾನಿಯಿಂದಾಗಿ ಸ್ಮರಣೆ ಕಳೆದು ಹೋಗುತ್ತದೆ. ಇದು ಸಾಮಾನ್ಯವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಲ್ಲಿ ಕಂಡು ಬರುತ್ತದೆ. ಅಲ್ಲದೇ ಅಲ್ಜೈಮರ್‌ ರೋಗಿಗಳಲ್ಲಿ ಕೂಡ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
ಕರ್ನಾಟಕದಲ್ಲಿ 3.5 ಲಕ್ಷ ಸೇರಿದಂತೆ ದೇಶದಲ್ಲಿ 53 ಲಕ್ಷ ವೃದ್ಧರು ಮರೆವಿನ ಕಾಯಿಲೆ ಹೊಂದಿದ್ದಾರೆಂದು ವರದಿಯಾಗಿದೆ. ಹೆಚ್ಚಿನ ಬುದ್ಧಿಮಾಂದ್ಯತೆಯ ಆರೈಕೆ ಕೇಂದ್ರಗಳ ಅಗತ್ಯತೆಯ ಜೊತೆಗೆ, ತರಬೇತಿ ಪಡೆದ ವೃತ್ತಿಪರ ಆರೈಕೆದಾರರ ಅವಶ್ಯಕತೆಯೂ ಇದೆ. “ಬುದ್ಧಿಮಾಂದ್ಯತೆಗಾಗಿ ತರಬೇತಿ ಪಡೆದ ಆರೈಕೆದಾರರ ಕೊರತೆಯಿದೆ. ಆದ್ದರಿಂದ ಆರೈಕೆಯಲ್ಲಿ ಜನರಿಗೆ ತರಬೇತಿ ನೀಡಲು ನಾವು ರಾಷ್ಟ್ರೀಯ ಉಪಕ್ರಮವನ್ನು ತಂದಿದ್ದೇವೆ. ಇದಕ್ಕಾಗಿ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಫೌಂಡೇಶನ್ ನಮಗೆ ಬೆಂಬಲ ನೀಡಿದೆ ಎಂದು ಡಾ.ಶಿವಕುಮಾರ್ ಹೇಳಿದರು.

ಪ್ರಮುಖ ಸುದ್ದಿ :-   ಅತ್ಯಾಚಾರ ಆರೋಪ: ಮಾಜಿ ಸಚಿವ ವಿನಯ ಕುಲಕರ್ಣಿ ವಿರುದ್ಧ ಎಫ್‌ಐಆ‌ರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement