ಮಥುರಾ ಶ್ರೀಕೃಷ್ಣ ದೇಗುಲ ಸಮೀಪದ ಮಸೀದಿ ತೆರವು ಅರ್ಜಿ ವಿಚಾರಣೆಗೆ ಒಪ್ಪಿಗೆ: ಆದೇಶ ಕಾಯ್ದಿರಿಸಿದ ಕೋರ್ಟ್

ಮಥುರಾ: ಇಲ್ಲಿನ ಶ್ರೀಕೃಷ್ಣ ದೇವಾಲಯದ ಸಮೀಪ ಇರುವ ಮಸೀದಿ ತೆರವುಗೊಳಿಸಬೇಕು ಎಂದು ಕೋರಿ ಸಿವಿಲ್ ನ್ಯಾಯಾಲಯದಲ್ಲಿ ಮೊಕದ್ದಮೆ ವಿಚಾರಣಗೆ ಒಪ್ಪಿಗೆ ನೀಡುವ  ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
ಇಲ್ಲಿನ ಕತ್ರಾ ಕೇಶವ್ ದೇವ್ ದೇವಸ್ಥಾನದ ಸುತ್ತಮುತ್ತಲಿನ 13.37 ಎಕರೆ ಜಮೀನಿನ ಮಾಲೀಕತ್ವವನ್ನು ಹಾಗೂ ಈ ಪ್ರದೇಶದಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಬೇಕೆಂದು ಕೋರಿ ದಾಖಲಿಸಿದ್ದ ಹೊಸ ಸಿವಿಲ್ ಮೊಕದ್ದಮೆ ವಿಚಾರಣೆಗೆ ಒಪ್ಪಿಗೆ ನೀಡುವ ಕುರಿತು ನ್ಯಾಯಾಲಯ ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ದೇವ್ ಕಾಂತ್ ಶುಕ್ಲಾ ಅವರು, ಹಳೆಯ ಕೇಶವ್ ದೇವ್ ದೇವಸ್ಥಾನದ ಸೇವಾಯತ್ ಫಿರ್ಯಾದಿ ಪವನ್ ಕುಮಾರ್ ಶಾಸ್ತ್ರಿ ಅವರ ಪರವಾಗಿ ಸಲ್ಲಿಸಿದ ಮನವಿಯನ್ನು ಆಲಿಸಿದ ನಂತರ, ಮೊಕದ್ದಮೆಯ ಪ್ರವೇಶದ ತೀರ್ಪನ್ನು ಕಾಯ್ದಿರಿಸಿದೆ ಮತ್ತು ಶನಿವಾರ ತೀರ್ಪು ಪ್ರಕಟಿಸಲಿದೆ ಎಂದು ಶಾಸ್ತ್ರೀ ಪರ ವಕೀಲ ರಾಮಶಂಕರ್ ಭಾರದ್ವಾಜ್ ಹೇಳಿದರು.
ಫೆ.2 ರಂದು ಈ ಮೊಕದ್ದಮೆ ಸಿವಿಲ್ ನ್ಯಾಯಾಧೀಶ ಛಾಯಾ ಶರ್ಮಾ ಅವರ ನ್ಯಾಯಾಲಯದಲ್ಲಿ ಬಂತು.. ಆದರೆ, ನ್ಯಾಯಾಧೀಶರು ಗುರುವಾರ ರಜೆಯಲ್ಲಿದ್ದ ಕಾರಣ ಇದನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಶುಕ್ಲಾ ವಿಚಾರಣೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು, ಶಾಹಿ ಮಸೀದಿ ಈದ್ಗಾ ನಿರ್ವಹಣಾ ಸಮಿತಿ ಮತ್ತು ಶ್ರೀ ಕೃಷ್ಣ ಜನ್ಮಸ್ಥಾನ್ ಸೇವಾ ಸಂಸ್ಥೆ ನಡುವಿನ ಭೂ ಒಪ್ಪಂದವನ್ನು ಅನುಮೋದಿಸುವ 1968ರ ನ್ಯಾಯಾಲಯದ ಆದೇಶವನ್ನು ರದ್ದುಪಡಿಸುವಂತೆ ಮೊಕದ್ದಮೆಯಲ್ಲಿ ಕೋರಲಾಗಿದೆ.
ಶಾಹಿ ಮಸೀದಿ ಈದ್ಗಾ ಇಂತಜಾಮಿಯಾ ಸಮಿತಿಯ ಕಾರ್ಯದರ್ಶಿ ಮತ್ತು ಲಕ್ನೋ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷರಿಗೆ ಅದೇಶ ಹೊರಡಿಸುವಂತೆ ನ್ಯಾಯಾಲಯವನ್ನು ಕೋರಲಾಗಿದೆ. ಅಲ್ಲದೆ, ಶಾಹಿ ಮಸೀದಿ ಈದ್ಗಾವನ್ನು ದೇವಾಲಯದ ಒಂದು ಭಾಗದಿಂದ ನಿಗದಿತ ಸಮಯದೊಳಗೆ ತೆಗೆದುಹಾಕುವಂತೆ ಅವರಿಗೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ ಎಂದು ಶಾಸ್ತ್ರೀ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರತನ್‌ ಟಾಟಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ತನ್ನನ್ನು ರಕ್ಷಿಸಿದ ವ್ಯಕ್ತಿಗೆ ಅಂತಿಮ ನಮನ ಸಲ್ಲಿಸಿದ ಪ್ರೀತಿಯ ನಾಯಿ ʼಗೋವಾʼ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement