ವಿಮಾನನಿಲ್ದಾಣಗಳ ಖಾಸಗೀಕರಣಕ್ಕೆ ಸರಕಾರ ಚಿಂತನೆ

ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ೬ ರಿಂದ ೧೦ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಬಿಡ್‌ ಆಹ್ವಾನಿಸಲು ಸರ್ಕಾರ ಯೋಜಿಸಿದೆ.
ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ಲಾಭರಹಿತ ವಿಮಾನ ನಿಲ್ದಾಣ ಮತ್ತು ಲಾಭ ಗಳಿಸುವ ವಿಮಾನ ನಿಲ್ದಾಣಗಳನ್ನು ಪ್ಯಾಕೇಜ್‌ನಂತೆ ನೀಡುತ್ತಿದೆ. ಆರರಿಂದ 10 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ನೀಡುವ ಬಗ್ಗೆ ನಾವು ಚಿಂತಿಸುತ್ತಿದ್ದೇವೆ. ವಿಮಾನ ನಿಲ್ದಾಣಗಳನ್ನು ಖಾಸಗಿ ವಲಯಕ್ಕೆ 50 ವರ್ಷಗಳವರೆಗೆ ನೀಡಲು ಉದ್ದೇಶಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ ಖರೋಲಾ ತಿಳಿಸಿದ್ದಾರೆ.
ಸೌಲಭ್ಯಗಳ ದೀರ್ಘಕಾಲೀನ ಗುತ್ತಿಗೆಗಳನ್ನು ಉತ್ತೇಜಿಸಲು ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ಅವುಗಳ ನಿರ್ವಹಣೆ ಮತ್ತು ಮೂಲಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ ಬಿಡ್ಡಿಂಗ್ ನಿಯಮಗಳನ್ನು ರೂಪಿಸಲಾಗುವುದು.
ಈವರೆಗೆ, ಲಖ್ನೊ, ಅಹಮದಾಬಾದ್, ತಿರುವನಂತಪುರಂ, ಗುವಾಹಟಿ, ಜೈಪುರ ಮತ್ತು ಮಂಗಳೂರು ವಿಮಾನ ನಿಲ್ದಾಣಗಳನ್ನು 2018 ರಲ್ಲಿ ಪ್ರಾರಂಭವಾದ ವಿತರಣಾ ಪ್ರಕ್ರಿಯೆಯ ಮೊದಲ ಸುತ್ತಿನಲ್ಲಿ ಅದಾನಿ ಗ್ರೂಪ್‌ಗೆ ಸರ್ಕಾರ ನೀಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement