ಬೆಂಗಳೂರು: 2020ರ ರಕ್ಷಣಾ ಆವೃತ್ತಿಯು ಸ್ಟಾರ್ಟ್ ಅಪ್‌ಗಳಿಗೆ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) 100 ಕೋಟಿ ರೂ.ಗಳ ವರೆಗೆ ಮೇಕ್-ಇನ್-ಇಂಡಿಯಾ ವೇದಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ, ಸ್ಟಾರ್ಟ್ ಅಪ್‌ಗಳಿಂದಲೇ ದೇಶದ ಆರ್ಥಿಕತೆಗೆ ಚಾಲನೆ ಸಿಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ಹೇಳಿದ್ದಾರೆ. .
ಮೂರು ದಿನಗಳ ಏರೋ ಇಂಡಿಯಾ 2021 ರ ಕೊನೆಯ ದಿನದಂದು ಆಯೋಜಿಸಲಾಗಿದ್ದ “ಸ್ಟಾರ್ಟ್ ಅಪ್ ಮಂಥನ್”ನಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆಯು ಶೀಘ್ರದಲ್ಲೇ ಸ್ಟಾರ್ಟ್ ಅಪ್‌ಗಳಿಂದ ಚಾಲನೆಗೊಳ್ಳಲಿದೆ ಮತ್ತು ಸರ್ಕಾರವು ಅದಕ್ಕೆ ಆದ್ಯತೆ ನೀಡಲಿದೆ. ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಇತ್ತೀಚಿಗೆ ಪ್ರವೇಶಿಸಿದವರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿರುತ್ತದೆ ಎಂದರು.
ಖಾಸಗಿ ಉದ್ಯಮಕ್ಕೆ ಡಿಆರ್‌ಡಿಒದ ಪೇಟೆಂಟ್‌ಗಳು ಮತ್ತು ಪ್ರಯೋಗಾಲಯಗಳನ್ನು ತೆರೆದುಕೊಳ್ಳಲಿದೆ. ತಂತ್ರಜ್ಞಾನ ಕ್ಷೇತ್ರಗಳಲ್ಲಿ ಯುವ ವಿಜ್ಞಾನಿಗಳ ಪ್ರಯೋಗಾಲಯಗಳಿಗೆ ಉತ್ತೇಜನ ನೀಡುವುದು, ಇದಕ್ಕಾಗಿ ಐಡೆಕ್ಸ್, ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್ (ಡಿಐಎಸ್ಸಿ) ಮತ್ತು ಐಡಿಎಕ್ಸ್ 4 ಫೌಜಿ ಮುಂತಾದ ಕಾರ್ಯಕ್ರಮಗಳನ್ನು ಒಳಗೊಂಡಂತೆ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದುಹೇಳಿದರು.
1,200 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಲ್ಲಿ 60 ವಿಜೇತರು ಮತ್ತು ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್ (ಡಿಐಎಸ್ಸಿ)ನಲ್ಲಿ ಭಾಗವಹಿಸಿದ ನಾವನ್ಯಕಾರರು ಮೂಲಮಾದರಿಗಳನ್ನು ನಿರ್ಮಿಸಲು ತಲಾ 1.5 ಕೋಟಿ ರೂ.ಗಳ ಅನುದಾನವನ್ನು ಪಡೆದಿದ್ದಾರೆ. ಇನ್ನೋವೇಶನ್ ಫಾರ್ ಡಿಫೆನ್ಸ್ ಎಕ್ಸಲೆನ್ಸ್ (ಐಡಿಎಕ್ಸ್) ಸ್ಟಾರ್ಟ್ ಅಪ್ ಗಳಿಗೆ ಲಭ್ಯವಿರುವ ಹಣಕಾಸು ಹೆಚ್ಚಳವನ್ನು ಪರಿಗಣಿಸಲು ಅವರು ರಕ್ಷಣಾ ಸಚಿವಾಲಯದ ಅಧಿಕಾರಿಗಳನ್ನು ಕೇಳಿದರು.
ಇದು 41,000ಕ್ಕೂ ಹೆಚ್ಚು ಸ್ಟಾರ್ಟ್ ಅಪ್, 4.7 ಲಕ್ಷ ಉದ್ಯೋಗಗಳು ಮತ್ತು 4,500 ಕೋಟಿ ರೂ.ಗಳ ಫಂಡಿಂಗ್ ವ್ಯವಸ್ಥೆಯನ್ನು ಸೃಷ್ಟಿಸಿದೆ. ಫಂಡ್ ಆಫ್ ಫಂಡ್ಸ್ ಯೋಜನೆಯ ಮೂಲಕ 384 ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ನಡೆಯಲಿದೆ ಎಂದರು.
300ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಪ್ರಸ್ತುತ ತೊಡಗಿಸಿಕೊಂಡಿವೆ ಮತ್ತು ಐಡೆಕ್ಸ್ 10 ಸ್ಟಾರ್ಟ್ ಅಪ್ ಗಳು ಏರೋ ಇಂಡಿಯಾ 2021 ರಲ್ಲಿ ಪ್ರದರ್ಶಿಸಲಾದ 100 ಕೋಟಿ ಮೌಲ್ಯದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿವೆ. ಐಡೆಕ್ಸ್ 4 ಫೌಜಿ ಹೊಸ ವಿಂಡೋವನ್ನು ತೆರೆಯುತ್ತದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ