ನವ ದೆಹಲಿ: ಫೆಬ್ರವರಿ 3ರ ವರೆಗೆ ಒಟ್ಟು 96,28,179 ಆರೋಗ್ಯ ಕಾರ್ಯಕರ್ತರು ಮತ್ತು 78,51,249 ಮುಂಚೂಣಿ ಕೆಲಸಗಾರರು ಕೋವಿಡ್ -19 ಲಸಿಕೆಗಾಗಿ ನೋಂದಾಯಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಶುಕ್ರವಾರ ಲೋಕಸಭೆಗೆ ತಿಳಿಸಿದ್ದಾರೆ.
ಅಂದಾಜು ಮೂರು ಕೋಟಿ ಆರೋಗ್ಯ ಮತ್ತು ಮುಂಚೂಣಿ ಕೆಲಸಗಾರರ ಲಸಿಕೆಗಾಗಿ ಕಾರ್ಯಾಚರಣಾ ವೆಚ್ಚವಾಗಿ ಮಾಡಬೇಕಾದ ಖರ್ಚು ಸುಮಾರು 80480 ಕೋಟಿ ರೂ.ಗಳು ಎಂದು ವರ್ಧನ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಕೋ-ವಿನ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಫಲಾನುಭವಿಗಳ ಪ್ರಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ವಹಣಾ ವೆಚ್ಚವನ್ನು ಪೂರೈಸಲು ಹಣವನ್ನು ವಿತರಿಸಲಾಗುತ್ತಿದೆ. ವ್ಯಾಕ್ಸಿನೇಷನ್‌ನನ್ನು ಆರಂಭಿಕ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕೆಲಸಗಾರರಿಗೆ ಆದ್ಯತೆ ನೀಡಲಾಗುತ್ತದೆ. ನಂತರ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು 50 ವರ್ಷಕ್ಕಿಂತ ಕಡಿಮೆಯಿದ್ದರೂ ಕೊಮೊರ್ಬಿಡಿಟಿಗಳನ್ನು ಹೊಂದಿದ್ದವರಿಗೆ ನೀಡಲಅಗುತ್ತದೆ ಎಂದು ಹೇಳಿದರು.
“
ನಿಮ್ಮ ಕಾಮೆಂಟ್ ಬರೆಯಿರಿ