ಕಿಸಾನ್‌ ವಿಶೇಷ ರೈಲು

ಅಗರ್ತಾಲ: ದೇಶದ ಈಶಾನ್ಯ ಪ್ರದೇಶಗಳ ರೈತರು ಮತ್ತು ಸಾಗಣೆದಾರರ ಅನುಕೂಲಕ್ಕಾಗಿ ಈಶಾನ್ಯ ಗಡಿನಾಡು ರೈಲ್ವೆ (ಎನ್‍ಎಫ್‍ಆರ್) ಕಿಸಾನ್ ವಿಶೇಷ ರೈಲುಗಳನ್ನು ಫೆ.11 ರಿಂದ ಅಗರ್ತಾಲದಿಂದ ಹೌರಾ ಮತ್ತು ಸೀಲ್ಡಾವರೆಗೆ ಓಡಿಸಲು ರೈಲ್ವೆ ಇಲಾಖೆ  ನಿರ್ಧರಿಸಿದೆ.

ಕಿಸಾನ್ ವಿಶೇಷ ರೈಲು ಪ್ರತಿ ಗುರುವಾರ ವಾರಕ್ಕೊಮ್ಮೆ 19.15 ಗಂಟೆಗೆ ಅಗರ್ತಾಲದಿಂದ ಹೊರಟು ಶನಿವಾರ ಸೀಲ್ಡಾ ತಲುಪಲಿದೆ. ಧರ್ಮಾನ್ ನಗರ, ಬದಾರಪುರ್, ಲುಂಡಿಂಗ್ ಗೌಹಾತಿ, ಕಾಮಾಕ್ಯ, ಗೋಲ್‍ಪರಾ, ನ್ಯೂಬೋಗಾಯ್‍ಗಾಂವ್, ನ್ಯೂ ಅಲಿಪುರದೌರ್, ನ್ಯೂ ಕೂಚ್ಬೇಹಾರ್, ನ್ಯೂ ಜಲ್‍ಪೈಗುರಿ, ಮಾಲ್ಡಾ ಟೌನ್, ಕಾಲ್ತಿಪುರ್, ಬರ್ದಾನಮನ್ ಮತ್ತು ಬಂಡೆಲ್ ತಲುಪಲಿದೆ.

ಭಾರತೀಯ ರೈಲ್ವೆ ಕಿಸಾನ್ ರೈಲು ಸೇವೆಗಳಿಂದ ಈ ಭಾಗದ ರೈತರ ಕೃಷಿ ಉತ್ಪನ್ನಗಳು ಹಾಗೂ ಹಾಲು, ಮಾಂಸ ಮತ್ತು ಮೀನು ಮುಂತಾದ ಉತ್ಪನ್ನಗಳ ಸಾಗಾಣಿಕೆಗೆ ಅನುಕೂಲ ಕಲ್ಪಿಸಿದೆ ಎಂದು  ರೈಲ್ವೆ ತಿಳಿಸಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement