ಜನರಲ್ ತಿಮ್ಮಯ್ಯ ವಸ್ತುಸಂಗ್ರಹಾಲಯ ಲೋಕಾರ್ಪಣೆ

ಮಡಿಕೇರಿ :ಜನರಲ್ ಕೆ.ಎಸ್ ತಿಮಯ್ಯ ವಸ್ತುಸಂಗ್ರಹಾಲಯ ಸೇನಾಪಡೆಯ ಅತ್ಯುತ್ತಮ ವೀರ ಸೇನಾನಿಯ ಸೇವೆ ಮತ್ತು ಕೊಡುಗೆಯನ್ನು ಸಂರಕ್ಷಿಸುತ್ತದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದರು.
ಶನಿವಾರ ಮಡಿಕೇರಿಯಲ್ಲಿ ಜನರಲ್ ಕೆ.ಎಸ್ ತಿಮ್ಮಯ್ಯ ವಸ್ತುಸಂಗ್ರಹಾಲಯ ‘ಸನ್ನಿಸೈಡ್’ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, .ಜನರಲ್ ತಿಮಯ್ಯ ಅವರ ನಿವಾಸ ‘ಸನ್ನಿ ಸೈಡ್’ನಲ್ಲಿರುವ ಸ್ಮರಣಿಕೆಗಳು ನಮ್ಮ ಕೆಚ್ಚೆದೆಯ ಸೇನಾಪಡೆಗಳ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತವೆ ಎಂದಿದ್ದಾರೆ..
ಜನರಲ್ ತಿಮ್ಮಯ್ಯ ಅವರು ಬೆಳೆದ ‘ಸನ್ನಿಸೈಡ್’ ನಿವಾಸವನ್ನು ವಸ್ತುಸಂಗ್ರಹಾಲಯವಾಗಿ ರೂಪಿಸಲಾಗಿದೆ. ಕೊಡಗು ಜಿಲ್ಲೆ ಜನರಲ್ ತಿಮಯ್ಯ ಮತ್ತು ಫೀಲ್ಡ್ ಮಾರ್ಷಲ್ ಕಾರಿಯಪ್ಪನವರಂತಹ ವೀರ ಯೋಧರಿಂದ ನಮ್ಮ ಸಶಸ್ತ್ರ ಪಡೆಗಳನ್ನು ಶ್ರೀಮಂತಗೊಳಿಸಿದ ಗೌರವಕ್ಕೆ ಪಾತ್ರವಾಗಿದೆ. ವಸ್ತುಸಂಗ್ರಹಾಲಯವು ನಮ್ಮ ಯುವಕರಿಗೆ ಜನರಲ್ ತಿಮಯ್ಯ ಅವರ ಪರಂಪರೆಯನ್ನು ಮುಂದುವರಿಸಲು ಸ್ಫೂರ್ತಿ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು..
1971ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದ ಟ್ಯಾಂಕರ್ ಹಾಗೂ ಮಿಗ್ 21 ಯುದ್ಧ ವಿಮಾನ ಹಾಗೂ ಭಾರತೀಯ ಯೋಧರು ಬಳಸಿದ ಶಸ್ತ್ರಾಸ್ತ್ರಗಳು ಈ ಸಂಗ್ರಹಾಲಯದಲ್ಲಿವೆ. ಕೊಡಗಿನ ಸೇನಾ ಪರಂಪರೆಯನ್ನು ಈ ವಸ್ತುಸಂಗ್ರಹಾಲಯ ಸಾರುತ್ತದೆ ಎಂದರು.
ಇದಕ್ಕೂ ಮೊದಲು ರಾಷ್ಟ್ರಪತಿ ರಾಮನಾಥ್ ಗೋವಿಂದ್ ‌ಅವರು ಕಾವೇರಿ ಉಗಮ ಸ್ಥಾನವಾದ ತಲಕಾವೇರಿ ಹಾಗೂ ಭಾಗಮಂಡಲಕ್ಕೆ ಭೇಟಿ ನೀಡಿದರು.
ತಲಕಾವೇರಿಯಲ್ಲಿ ಅಲ್ಲಿ ಅವರು ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಪ್ರಮುಖ ಸುದ್ದಿ :-   ದರ್ಶನ, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement