ಥಾಣೆ(ಮಹಾರಾಷ್ಟ್ರ): ಇಲ್ಲಿನ ಮೀರಾ ರಸ್ತೆಯಲ್ಲಿ ರಸ್ತೆ ಪಕ್ಕದಲ್ಲಿ ಇಡ್ಲಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯನ್ನು ಮೂವರು ಗ್ರಾಹಕರು ಹತ್ಯೆ ಮಾಡಿದ ಘಟನೆ ನಡೆದಿದೆ.
ಮೃತನನ್ನು ವೀರೇಂದ್ರ ಯಾದವ್ ಎಂದು ಗುರುತಿಸಲಾಗಿದೆ. ಆತ ಇಡ್ಲಿ ಮಾರಾಟ ಮಾಡುತ್ತಿದ್ದ. ಮೂವರು ಗ್ರಾಹಕರು ಅವರ ರಸ್ತೆ ಬದಿಯ ಡಬ್ಬಾ ಅಂಗಡಿಗೆ ಬಂದು 20 ರೂ. ಬಾಕಿ ಇದೆ ಎಂದು ಜಗಳ ತೆಗೆದರು. ಪರಸ್ಪರ ವಾಗ್ವಾದ ನಡೆದು ಗಲಾಟೆ ನಡೆಯಿತು.
ಮೂವರು ಗ್ರಾಹಕರು ಮಾರಾಟಗಾರನನ್ನು ತಳ್ಳಿದಾಗ ಕೆಳಗೆ ಬಿದ್ದ ವೀರೇಂದ್ರ ತಲೆಗೆ ಪೆಟ್ಟಾಯಿತು. ಹತ್ತಿರದ ಜನರು ಅವನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದರು. ಮೀರಾ ಭಯಂದರ್-ವಸೈ ವಿರಾರ್ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಶೋಧ ನಡೆಸಿದ್ದಾರೆ.
advertisement
9535127775 / 9901837775 / 6364528715 / 08362775155 / https://icsmpucollege.com/
ನಿಮ್ಮ ಕಾಮೆಂಟ್ ಬರೆಯಿರಿ