ನೆಟ್‌ ಪಾಸಾದ ಗಿರಿಜನ ಹಾಡಿಯ ಯುವತಿ ಸೃಜನಾ

ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಗರಹೊಳೆ ನಾಗಾಪುರ ಗಿರಿಜನ ಹಾಡಿಯ ಯುವತಿಯೊನ್ನರು ಯುಜಿಸಿ ನಡೆಸುವ ನೆಟ್‌ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾರೆ.
ನೆಟ್‌ ಪರೀಕ್ಷೆ ಪಾಸಾದ ಮೊದಲ ಯುವತಿ ಎಂಬ ಕೀರ್ತಿಗೆ ವಿ.ಪಿ.ಸೃಜನ ಪಾತ್ರವಾಗಿದ್ದಾರೆ. ಮುಂದೆ ಐಎಎಸ್‌ ಮಾಡುವ ಗುರಿ ಈಕೆಯದು. ಹಲವು ಸವಾಲುಗಳ ಮಧ್ಯೆ ಕೂಡ ಸೃಜನ ಸಾಧನೆ ಮಾಡಿದ್ದು ವಿಶೇಷ. ೨೦೨೦ರ ಅಕ್ಟೋಬರ್‌ನಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ನೆಟ್‌ ಪರೀಕ್ಷೆಯಲ್ಲಿ ಸೃಜನ ಉತ್ತಮ ಅಂಕದೊಂದಿಗೆ ಪಾಸು ಮಾಡಿದ್ದಾರೆ. ಒಂದೇ ಪ್ರಯತ್ನದಲ್ಲಿ ನೆಟ್‌ ಪಾಸಾಗಿರುವುದು ವಿಶೇಷ.
ಬಾಳೆಕೋಡು ಬುಡಕಟ್ಟು ಹಾಡಿಯ ವೀಣಾ ಹಾಗೂ ಪ್ರಭು ದಂಪತಿಯ ಪುತ್ರಿ ಸೃಜನ ದೈಹಿಕವಾಗಿ ಎತ್ತರವಿಲ್ಲದ ಕಾರಣದಿಂದ ಶಾಲಾ-ಕಾಲೇಜಿನಲ್ಲಿ ಶಿಕ್ಷಣ ಪಡೆಯುವಾಗ ಹಲವರ ಕುಹಕದ ಮಾತುಗಳನ್ನು ಕೇಳಬೇಕಾಯಿತು. ಈ ಮಾತುಗಳನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆ ಮಾಡಿದ್ದಾರೆ. ಹುಣಸೂರು ತಾಲೂಕಿನ ನಲ್ಲೂರಪಾಲ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು, ಹುಣಸೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಸರಕಾರಿ ಮಹಿಳಾ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ ಮುಂದೆ ಎಂ.ಕಾಂ ಪೂರ್ಣಗೊಳಿಸಿದರು.

ಇಂದಿನ ಪ್ರಮುಖ ಸುದ್ದಿ :-   ಕಮಲ-ಜೆಡಿಎಸ್‌ ಮೈತ್ರಿ ಬೆನ್ನಲ್ಲೇ ಯಡಿಯೂರಪ್ಪ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement