ಬೆಂಗಳೂರು: ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳನ್ನು ಕೊಲ್ಲುವುದಾಗಿ ಬೆದರಿಕೆಯ ಪತ್ರ ಬರೆದಿದ್ದಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ೭೨ರ ಹರೆಯದ ವ್ಯಕ್ತಿಯೊಬ್ಬರ ಮೇಲೆ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿದೆ.
ನ್ಯಾಯಮೂರ್ತಿ ಅಭಯ ಶ್ರೀನಿವಾಸ, ಓಕಾ ಹಾಗೂ ನ್ಯಾಯಮೂರ್ತಿ ಶಂಕರ ಮಗದುಮ್ ಅವರನ್ನೊಳಗೊಂಡ ನ್ಯಾಯಪೀಠ, ನ್ಯಾಯಾಲದಯ ಅವಹೇಳನ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಿದೆ. ಈ ಕುರಿತ ವಿಚಾರಣೆ ಮಾರ್ಚ್ ೧ರಂದು ನಡೆಯಲಿದೆ.
ಆರೋಪಿ ಎಸ್.ವಿ.ಶ್ರೀನಿವಾಸ್ ರಾವ್ ಅವರು ಆಗಸ್ಟ್ 2010 ರಲ್ಲಿ ಕೂಡ ಇದೇ ರೀತಿಯ ಪ್ರಕರಣವನ್ನು ಎದುರಿಸಿದ್ದರು. ನಂತರ ಅವರು ಬೇಷರತ್ತಾಗಿ ಕ್ಷಮೆಯಾಚಿಸಿದ ನಂತರ ಪ್ರಕರಣವನ್ನು ಕೈಬಿಡಲಾಗಿತ್ತು. ಜನವರಿ 21ರಂದು, ರಾವ್ ಅವರು ರಿಜಿಸ್ಟ್ರಾರ್‌ಗೆ ಪತ್ರವೊಂದನ್ನು ಬರೆದು, ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಲಯದ 28 ಅತ್ಯಂತ ಭ್ರಷ್ಟ ನ್ಯಾಯಾಧೀಶರಲ್ಲಿ ಇಬ್ಬರು ನ್ಯಾಯಾಧೀಶರನ್ನು ಮತ್ತು ಇಬ್ಬರು ಭ್ರಷ್ಟ ವಕೀಲರನ್ನು ಕೊಲ್ಲಲು ನಿರ್ಧರಿಸಿದ್ದಾಗಿ ತಿಳಿಸಿದ್ದರು. ಬೆದರಿಕೆ ಪತ್ರದ ಪ್ರತಿಯನ್ನು ಹೈಕೋರ್ಟ್‌ನ ಭದ್ರತೆಯ ಮುಖ್ಯಸ್ಥ ಪೊಲೀಸ್ ಅಧಿಕಾರಿಗೆ ಕಳುಹಿಸುವಂತೆ ರಿಜಿಸ್ಟ್ರಾರ್‌ಗೆ ಉಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ