ಮಾಧ್ಯಮಗಳೊಂದಿಗೆ ಸಂವಹನ ಬೇಡ: ಅಧಿಕಾರಿಗಳಿಗೆ ಆರ್‌ಬಿಐ ತಾಕೀತು

ನವದೆಹಲಿ: ಕೇಂದ್ರಿಯ ಬ್ಯಾಂಕ್‌ನ ನೀತಿಗಳ ಅನುಷ್ಠಾನ ಕುರಿತು ನಡೆಸಲಾಗುವ ಸಭೆಗಳಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳು ಯಾವುದೇ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಸೂಚನೆ ನೀಡಿದೆ.
ಹಳೆಯ ಸರಣಿಯ ೧೦೦ರೂ. ೧೦ ರೂ. ಹಾಗೂ ೫ ರೂ. ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡ ನಂತರ ಆರ್‌ಬಿಐ ಸುತ್ತೋಲೆ ಹೊರಡಿಸಿದೆ.
ಅಧಿಕೃತ ಸಭೆಗಳಿಗೆ ಹಾಜರಾಗುವ ಅಧಿಕಾರಿಗಳು ಯಾವುದೇ ಸಂದರ್ಭದಲ್ಲಿಯೂ ಮಾಧ್ಯಮಗಳೊಂದಿಗೆ ಸಂವಹನ ನಡೆಸಬಾರದು. ಕೇಂದ್ರಿಯ ಬ್ಯಾಂಕ್‌ ಮಾಧ್ಯಮಗಳೊಂದಿಗೆ ಸಂವಹನ ನಡೆಸದಂತೆ ಅಧಿಕಾರಿಗಳಿಗೆ ಸೂಚಿಸುರುವುದು ಇದೇ ಮೊದಲು ಎನ್ನಲಾಗಿದೆ.
೫೦೦ರೂ. ಹಾಗೂ ೧೦೦೦ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಿಕರಣಗೊಳಿಸಿದ ನಂತರ ಕರೆನ್ಸಿ ಹಿಂತೆಗೆದುಕೊಳ್ಳುವ ಬಗ್ಗೆ ಪ್ರಟಕಗೊಳ್ಳುವ ಸುದ್ದಿಗಳು ಹೆಚ್ಚು ಗಮನ ಸೆಳೆಯುತ್ತಿವೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರತನ್ ಟಾಟಾ : ಶಿಕ್ಷಣದಿಂದ ಹಿಡಿದು ಲೋಕೋಪಕಾರದ ವರೆಗೆ...ಟಾಟಾ ಪರಂಪರೆಯ ಹಿಂದಿನ ವ್ಯಕ್ತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement