ಸೆಲ್ಫಿ ಹುಚ್ಚಿಗೆ ದಂಪತಿ ಸಾವು

ಹಾಸನ: ಸೆಲ್ಫಿ ಹುಚ್ಚಿಗೆ ನವದಂಪತಿಗಳಿಬ್ಬರು ಜೀವ ಕಳೆದುಕೊಂಡಿದ್ದಾರೆ. ಕೃತಿಕಾ ಹಾಗೂ ಅರ್ಥೇಶ ದಂಪತಿ ಹೇಮಾವತಿ ನದಿಯಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.
ಬೈಕ್‌ ಮೇಲೆ ದಂಪತಿ ಹೆಂಡತಿಯ ತವರಿಗೆ ಹೋಗುವಾಗ ದಾರಿ ಮಧ್ಯೆ ನದಿಯ ದಡದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರ್ಘಟನೆ ಸಂಭವಿಸಿದೆ.
ನವವಿವಾಹಿತರ ಮಧ್ಯೆ ಜಗಳ ನಡೆದಿರುವುದು ಕಂಡುಬಂದಿಲ್ಲ. ಕಾಲು ಜಾರಿ ನದಿಯಲ್ಲಿ ಬಿದ್ದಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೆಲ್ಫಿಗಳ ಕಾರಣದಿಂದಾಗಿ ಸಾವು ಭಾರತದಲ್ಲಿ ಸಾಮಾನ್ಯ. ಕಳೆದ ವರ್ಷ ನವೆಂಬರ್‌ನಲ್ಲಿ, ಚೆನ್ನೈನಲ್ಲಿ ಯುವತಿಯೊಬ್ಬಳು ತನ್ನ ಭಾವಿ ಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಕಾಲು ಜಾರಿ ಬಾವಿಯಲ್ಲಿ ಬಿದ್ದು ಜೀವ ಕಳೆದುಕೊಂಡಿದ್ದಳು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಡಿಕೆ ಶಿವಕುಮಾರ ಹೇಳಿಕೆಗೆ ಖಂಡಿಸಿ ಸಿಎಂ ಸಿದ್ದರಾಮಯ್ಯಗೆ ಸಾಹಿತಿಗಳ ಪತ್ರ

ನಿಮ್ಮ ಕಾಮೆಂಟ್ ಬರೆಯಿರಿ

advertisement