ಕಬ್ಬಿನ ಪ್ರೋತ್ಸಾಹ ಧನ ವಿಳಂಬ: ಯುಪಿ ರೈತರ ಹೋರಾಟ ತೀವ್ರಕ್ಕೆ ಕಾರಣ

ಮುಜಫರನಗರ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕಬ್ಬಿನ ಪ್ರೋತ್ಸಾಹಧನ ಪಾವತಿಯಲ್ಲಿ ವಿಳಂಬವಾಗುತ್ತಿರುವುದು ಕೂಡ ರೈತರ ಹೋರಾಟ ತೀವ್ರಗೊಳ್ಳಲು ಮತ್ತೊಂದು ಕಾರಣವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂಬುದು ರೈತರ ಆರೋಪವಾಗಿದೆ.
ರೈತರ ಆಂದೋಲನ ತೀವ್ರಗೊಂಡ ನಂತರವೇ ಕೆಲ ಭಾಗದ ರೈತರಿಗೆ ಕಬ್ಬಿನ ಹಣ ಪಾವತಿಸಲಾಗಿದೆ. ಇನ್ನೂ ಹಲವು ರೈತರು ನಾಲ್ಕು ತಿಂಗಳುಗಳಿಂದ ಕಬ್ಬಿನ ಪ್ರೋತ್ಸಾಹಧನ ಪಾವತಿಗಾಗಿ ಕಾಯುತ್ತಿದ್ದೇವೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ನೆರೆಯ ಹರಿಯಾಣದಲ್ಲಿನ ಖಟ್ಟರ್‌ ಸರಕಾರ ಕಬ್ಬು ಕ್ವಿಂಟಲ್‌ಗೆ ೩೬೦ ರೂ. ಪ್ರೋತ್ಸಾಹಧನ ನೀಡುತ್ತಿದೆ. ಆದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರಕಾರ ಕೇವಲ ಕ್ವಿಂಟಲ್‌ಗೆ ೩೨೫ ರೂ. ನೀಡುತ್ತಿದೆ. ಉತ್ತರ ಪ್ರದೇಶ ಸರಕಾರ ರೈತರನ್ನು ಕಡೆಗಣಿಸುತ್ತಿದೆ ಎಂಬುದು ರೈತರ ಅಳಲು. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಕಬ್ಬು ಮುಖ್ಯ ಬೆಳೆಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement