ಪಿಎಸ್‌ಯು ಉತ್ತಮ ನಿರ್ವಹಣೆ ಸರ್ಕಾರದ ಬಯಕೆ: ನಿರ್ಮಲಾ

ನವದೆಹಲಿ: ತೆರಿಗೆದಾರರ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಕೇಂದ್ರ ಸರಕಾರ ಸ್ಪಷ್ಟ ಕಾರ್ಯತಂತ್ರ ರೂಪಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
ಬಜೆಟ್‌ ಕುರಿತು ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಪ್ರತಿ ಪಕ್ಷಗಳ ಆರೋಪವನ್ನು ವಿತ್ತ ಸಚಿವೆ ತಿರಸ್ಕರಿಸಿದ್ದಾರೆ.
ನಿಗದಿತ ಕ್ಷೇತ್ರಗಳಲ್ಲಿನ ಕೆಲವು ಸಾರ್ವಜನಿಕ ವಲಯದ ಉದ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಬಯಸಿದೆ, ಇದರಿಂದಾಗಿ ತೆರಿಗೆ ಪಾವತಿಸುವವರ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ನುಡಿದರು.
ಕೂಡಿಟ್ಟ ಬೆಳ್ಳಿಯನ್ನು ಇನ್ನಷ್ಟು ಹೆಚ್ಚಿಸಬೇಕೇ ಹೊರತು ಅದನ್ನು ಮಾರಾಟ ಮಾಡಬಾರದು. ತೆರಿಗೆ ಮೌಲ್ಯಮಾಪನಗಳನ್ನು ಸೀಮಿತಗೊಳಿಸುವ ಹಂತಗಳ ಮೂಲಕ ವ್ಯವಹಾರ ಮತ್ತು ಸರ್ಕಾರದ ನಡುವಿನ ವಿಶ್ವಾಸಾರ್ಹತೆ ಕೊರತೆಯನ್ನು ಪರಿಹರಿಸಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

ನಿಮ್ಮ ಕಾಮೆಂಟ್ ಬರೆಯಿರಿ

advertisement