ರೈತ ಹೋರಾಟದಲ್ಲಿ ಈಗ ಜಾಟರ ಪ್ರಾಬಲ್ಯ

ಗಾಜಿಪುರ: ರೈತ ಹೋರಾಟ ಹಿಂಸಾತ್ಮಕ ರೂಪ ತಳೆದಿದ್ದಕ್ಕೆ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಕಣ್ಣೀರು ಸುರಿಸಿದ್ದು ಸುದ್ದಿವಾಹಿನಿಗಳಲ್ಲಿ ಬಿತ್ತರಗೊಂಡ ನಂತರ ಪಂಜಾಬ್‌ ಸಿಖ್‌ ಕೇಂದ್ರಿತ ರೈತರ ಹೋರಾಟ ಈಗ ಜಾಟ್‌ ಪ್ರಾಬಲ್ಯದ ರೈತ ಹೋರಾಟವಾಗಿ ರೂಪುಗೊಂಡಿದೆ.
ಸದ್ಯ ಜಾಟ್‌ ಸಮುದಾಯವೇ ಆಂದೋಲನವನ್ನು ನಿಯಂತ್ರಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಹಿಂದೆ ಸಿಂಗು ಗಡಿಯಲ್ಲಿ ಹೋರಾಟ ತೀವ್ರವಾಗಿತ್ತು. ಆದರೆ ಈಗ ಗಾಜಿಪುರ ಪ್ರಮುಖ ಹೋರಾಟ ಕೇಂದ್ರ ಸ್ಥಳವಾಗಿ ಪರಿಣಮಿಸಿದೆ. ಹರಿಯಾಣ ಹಾಗೂ ಉತ್ತರ ಪ್ರದೇಶದ ನೂರಾರು ರೈತರು ಅಲ್ಲಿ ಸೇರಿ ವ್ಯವಸ್ಥಿತವಾಗಿ ಹೋರಾಟ ನಡೆಸುತ್ತಿದ್ದಾರೆ.
ಕೇಂದ್ರದೊಂದಿಗೆ ಮಾತುಕತೆ ನಡೆಸಲು ಹಾಗೂ ಮಾಧ್ಯಮಗಳೊಂದಿಗೆ ಸಂವಾದ ಮಾಡಲು ಪಂಜಾಬ್‌ ನಾಯಕರು ಮುಂಚೂಣಿಯಲ್ಲಿದ್ದರು. ಆದರೆ ಜನವರಿ ೨೬ರ ಹಿಂಸಾತ್ಮಕ ಘಟನೆಯ ನಂತರ ಈಗ ಟಿಕಾಯತ್‌ ಹೋರಾಟಗಾರರ ಪ್ರಮುಖ ನಾಯಕರಾಗಿ ಹೊರಹೊಮ್ಮಿದ್ದಾರೆ.
ಸ್ಪಾಟ್‌ಲೈಟ್‌ ಈಗ ಟಿಕಾಯತ್‌ ಮೇಲಿದೆ. ಈಗ ಯಾರೂ ಕೂಡ ಸಿಂಗು ಹಾಗೂ ಟಿಕ್ರಿ ಗಡಿಗಳ ಬಗ್ಗೆ ಮಾತನಾಡುವುದಿಲ್ಲ. ಜಾಟ್‌ ಕೇಂದ್ರಿತ ಗಾಜಿಪುರ ಗಡಿಯತ್ತ ಹೆಚ್ಚು ಗಮನ ಹರಿದಿದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಪ್ರಮುಖ ಸುದ್ದಿ :-   ವಿದೇಶೀ ವಿನಿಮಯ ಸಂಗ್ರಹ : 700 ಶತಕೋಟಿ ಡಾಲರ್ ದಾಟಿದ ವಿಶ್ವದ 4ನೇ ರಾಷ್ಟ್ರವಾದ ಭಾರತ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement