ಟ್ವಿಟರ್ ಇಂಡಿಯಾ ಪಾಲಿಸಿ ಮುಖ್ಯಸ್ಥೆ ಮಹಿಮಾ ಕೌಲ್‌ ರಾಜೀನಾಮೆ

 

ನವ ದೆಹಲಿ: ಟ್ವಿಟರ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥರಾದ ಮಹಿಮಾ ಕೌಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾರ್ಚ್ ಅಂತ್ಯದವರೆಗೆ ಕೌಲ್ ತನ್ನ ಸ್ಥಾನದಲ್ಲಿ ಮುಂದುವರಿಲಿದ್ದಾರೆ ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ.
ಒಂದು ವರ್ಷದೊಳಗೆ ಇದು ಇಂತಹ ಎರಡನೆಯ ರಾಜೀನಾಮೆಯಾಗಿದ್ದು, 2020ರ ಅಕ್ಟೋಬರ್‌ನಲ್ಲಿ ಫೇಸ್‌ಬುಕ್‌ನ ಭಾರತ ನೀತಿ ಮುಖ್ಯಸ್ಥರಾಗಿ ಅಂಕಿ ದಾಸ್ ರಾಜೀನಾಮೆ ನೀಡಿದ್ದರು.
ಮಹಿಮಾ ಕೌಲ್ ಅವರ ರಾಜೀನಾಮೆ ಸರ್ಕಾರದ ಎಚ್ಚರಿಕೆಗೆ ಸಂಬಂಧಿಸಿಲ್ಲ ಎಂದು ಟ್ವಿಟ್ಟರ್ ಮೂಲ ತಿಳಿಸಿದೆ. ಕಳೆದ ವಾರ ರೈತ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ನಿರ್ಬಂಧಿಸುವಂತೆ ಸರ್ಕಾರ ಹೇಳಿತ್ತು.
“ಈ ವರ್ಷದ ಆರಂಭದಲ್ಲಿ ಮಹಿಮಾ ಕೌಲ್ ಭಾರತ ಮತ್ತು ದಕ್ಷಿಣ ಏಷ್ಯಾದ ಟ್ವಿಟರ್ ಸಾರ್ವಜನಿಕ ನೀತಿ ನಿರ್ದೇಶಕರಾಗಿ ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಇದು ಟ್ವಿಟ್ಟರ್ನಲ್ಲಿ ನಮಗೆಲ್ಲರಿಗೂ ನಷ್ಟ. ಆದರೆ ಐದು ವರ್ಷಗಳಿಗಿಂತ ಹೆಚ್ಚು ಸಮಯದ ನಂತರ ಅವರ ವೈಯಕ್ತಿಕ ಜೀವನದ ಮೇಲೆ ಕೇಂದ್ರೀಕರಿಸುವ ಬಯಕೆ ವ್ಯಕ್ತಪಡಿಸಿದ್ದನ್ನು ನಾವು ಗೌರವಿಸುತ್ತೇವೆ. ಮಾರ್ಚ್ ಅಂತ್ಯದವರೆಗೆ ಮಹಿಮಾ ತನ್ನ ಪಾತ್ರದಲ್ಲಿ ಮುಂದುವರಿಯಲಿದ್ದಾರೆ ಎಂದು ಸಾರ್ವಜನಕ ಯೋಜನಾಧಿಕಾರಿ ಮೋನಿಕ್‌ ಮೆಚೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement