ಗಾಜಿಪುರ ರೈತ ಹೋರಾಟಕ್ಕೆ ಕರ್ನಾಟಕದ ೫೦ ರೈತರು

ಗಾಜಿಪುರ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಭಾರತೀಯ ಕಿಸಾನ್‌ ಯೂನಿಯನ್‌ ನಡೆಸುತ್ತಿರುವ ಚಳವಳಿಯಲ್ಲಿ ಪಾಲ್ಗೊಳ್ಳಲು ಕರ್ನಾಟಕದ ೫೦ ಜನ ರೈತರ ಗುಂಪು ಸೋಮವಾರ ಆಗಮಿಸಿತು.
ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಹೋರಾಟಗಾರರ ಡೇರೆಗಳನ್ನು ಕರ್ನಾಟಕದ ಕೃಷಿಕರು ಸೇರಿಕೊಂಡರು.
ನಾವು ಬೆಂಗಳೂರು ಹಾಗೂ ಮೈಸೂರಿನಲ್ಲಿ ರೈತ ಪರ ಹೋರಾಟದಲ್ಲಿ ಪಾಲ್ಗೊಂಡಿದ್ದೇವೆ. ಅಲ್ಲದೇ ಉತ್ತರ ಪ್ರದೇಶದಲ್ಲಿ ನಡೆದ ಮಹಾಪಂಚಾಯತ್‌ನಲ್ಲಿ ಭಾಗವಹಿಸಿದ್ದೆವೆ. ಈಗ ರೈತರೊಂದಿಗೆ ಚಳವಳಿಯ ಭಾಗವಾಗಲು ಬಂದಿದ್ದೇವೆ. ನಾವು ೫೦ ರೈತರು ಇಲ್ಲಿಗೆ ಬಂದಿದ್ದು, ರೈತ ಹೋರಾಟವನ್ನು ಬೆಂಬಲಿಸುತ್ತೇವೆ. ಕೇಂದ್ರ ಸರಕಾರ ಕೂಡಲೇ ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯ ಶರತ್‌ಕುಮಾರ ಹೇಳಿದರು.
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ರೈತ ಮುಖಂಡ ರಾಕೇಶ್‌ ಟಿಕಾಯತ್‌ ಅವರನ್ನು ಭೇಟಿ ಮಾಡಿ, ಪ್ರತಿಭಟನೆಗೆ ಕರ್ನಾಟಕದಿಂದ ಇನ್ನಷ್ಟು ರೈತರನ್ನು ಕರೆಸುವ ಭರವಸೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   "ಪ್ರತಿಯೊಂದು ದುಸ್ಸಾಹಸವೂ...ಯಾವುದೇ ಭಯೋತ್ಪಾದಕ ಕೃತ್ಯವೂ...": ಕದನ ವಿರಾಮ ಘೋಷಣೆ ನಂತ್ರ ಪಾಕಿಸ್ತಾನಕ್ಕೆ ಗಂಭೀರ ಎಚ್ಚರಿಕೆ ನೀಡಿದ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement