ನಾವೇನು ಮೂರ್ಖರೇ: ಪ್ರಧಾನಿ ಭಾಷಣಕ್ಕೆ ಖರ್ಗೆ ಪ್ರತಿಕ್ರಿಯೆ

ನವ ದೆಹಲಿ: ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾಷಣವನ್ನು ಕಾಂಗ್ರೆಸ್ ಸೋಮವಾರ ಟೀಕಿಸಿದೆ.
ವಿವಾದಾತ್ಮಕ ಮೂರು ಕೃಷಿ ಕಾನೂನುಗಳಲ್ಲಿ ಏನು ಕೊರತೆಯಿದೆ ಎಂಬ ಬಗ್ಗೆ ಪಕ್ಷದ ಪ್ರಸ್ತಾಪವನ್ನು ಅವರು ಕಡೆಗಣಿಸಿದ್ದಾರೆ ಎಂದು ಮೇಲ್ಮನೆಯಲ್ಲಿ ಪ್ರಧಾನಿ ಮೋದಿಯವರ ಭಾಷಣದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಸಂಸದ ಮಲ್ಲಿಕಾರ್ಜುನ್ ಖರ್ಗೆ ಹೇಲಿದ್ದು ‘ನಾವೆಲ್ಲರೂ ಮೂರ್ಖರೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಅವರ ಭಾಷಣದಲ್ಲಿ ಯಾವುದೇ ವಿಷಯ ಇರಲಿಲ್ಲ. ಮೂರು ಕೃಷಿ ಕಾನೂನುಗಳಲ್ಲಿ ಏನು ಕೊರತೆಯಿದೆ ಎಂಬ ಕಾಂಗ್ರೆಸ್ ಪ್ರಸ್ತಾಪವನ್ನು ಅವರು ಕಡೆಗಣಿಸಿದರು ಮತ್ತು ರೈತರು, ಪದವೀಧರರು ಮತ್ತು ವಿಜ್ಞಾನಿಗಳ ಕಳವಳವನ್ನು ತಿರಸ್ಕರಿಸಿದರು. ನಾವೆಲ್ಲರೂ ಮೂರ್ಖರೇ ಎಂದು ಕೇಳಿದ್ದಾರೆ.ರಾಷ್ಟ್ರಪತಿಯವರ ಭಾಷಣಕ್ಕೆ ರಾಜ್ಯಸಭೆಯಲ್ಲಿ ಧನ್ಯವಾದ ಸಲ್ಲಿಸಿ ಮಾತನಾಡಿದ ಪ್ರಧಾನಿ ಮೋದಿ ಕನಿಷ್ಠ ಬೆಂಬಲ ಬೆಲೆ ಮುಂದೆಯೂ ಇರುತ್ತದೆ ಎಂದು ಹೇಳಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement