ನೂತನ ವಿಜಯನಗರ ಜಿಲ್ಲೆಗೆ ಅಧಿಕೃತ ಮುದ್ರೆ

ಬಳ್ಳಾರಿ : ಜಿಲ್ಲೆಯ ಹಲವರ ವಿರೋಧದ ನಡುವೆಯೂ ಅಖಂಡ ಬಳ್ಳಾರಿ‌ ಜಿಲ್ಲೆಯ‌ನ್ನು ವಿಭಜನೆ ಮಾಡಿ ರಾಜ್ಯ ಸರ್ಕಾರ ಅಂತಿಮವಾಗಿ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸರ್ಕಾರ ಸೋಮವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.
ನೂತನ ಜಿಲ್ಲೆಯಲ್ಲಿ ಹೊಸಪೇಟೆ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿಗಳನ್ನು ತಾಲೂಕುಗಳಾಗಿ ಸೇರ್ಪಡೆ ಮಾಡಲಾಗಿದ್ದು, ಹೊಸಪೇಟೆ ಜಿಲ್ಲಾ ಕೇಂದ್ರವಾಗಲಿದೆ.
ವಿಜಯನಗರ ಜಿಲ್ಲೆ ಘೋಷಣೆ ವಿಳಂಬ‌ಕ್ಕೆ ಅಸಮಾಧಾನಗೊಂಡಿದ್ದ ವಿಜಯನಗರ ಸಚಿವ ಆನಂದ್ ಸಿಂಗ್ ಮುನಿಸಿಕೊಂಡು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. . ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಆಯೋಜಿಸಿದ್ದ ಔತಣಕೂಟಕ್ಕೂ ಗೈರಾಗಿ ಅಸಮಾಧಾನ ಹೊರ ಹಾಕಿದ್ದರು. ಅಂತಿಮವಾಗಿ ರಾಜ್ಯಸರ್ಕಾರ ವಿಜಯ ನಗರ ಜಿಲ್ಲೆಯನ್ನು ಘೋಷಣೆ ಮಾಡಿದ್ದು, ಇದು ರಾಜ್ಯದ ೩೧ನೇ ಜಿಲ್ಲೆಯಾಗಲಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಾಹನಗಳಿಗೆ ಕಣ್ಣುಕುಕ್ಕುವ ಎಲ್‌ಇಡಿ ಲೈಟ್‌ ಹಾಕಿಸಿದ್ದೀರಾ : ಜುಲೈ 1ರಿಂದ ಬೀಳಲಿದೆ ದಂಡ...

ನಿಮ್ಮ ಕಾಮೆಂಟ್ ಬರೆಯಿರಿ

advertisement