ಮೃತ ರೈತರ ಕುಟುಂಬಸ್ಥರಿಗೆ ನೆರವು: ಐವರು ಶಿಕ್ಷಣತಜ್ಞರಿಂದ ಪೋರ್ಟಲ್‌

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಮೃತಪಟ್ಟ ರೈತರ ನೋಂದಣಿ ಹಾಗೂ ಅವರ ಕುಟುಂಬಸ್ಥರಿಗೆ ನೆರವು ನೀಡಲು ಐವರು ಶಿಕ್ಷಣತಜ್ಞರು ಪೋರ್ಟಲ್‌‌ ಆರಂಭಿಸಿದ್ದಾರೆ.
ವಿಶ್ವವಿದ್ಯಾಲಯಗಳ ಪ್ರಸ್ತುತ ಮತ್ತು ಮಾಜಿ ಉಪಕುಲಪತಿಗಳು ಸೇರಿದಂತೆ ಐದು ಪ್ರಮುಖ ಶಿಕ್ಷಣ ತಜ್ಞರು ಭಾನುವಾರ ಪಂಜಾಬ್ ಕೃಷಿ ವಿಶ್ವವಿದ್ಯಾಲಯದಲ್ಲಿ (ಪಿಎಯು) ಪೋರ್ಟಲ್‌ಗೆ ಚಾಲನೆ ನೀಡಿದರು.
ಪ್ರತಿಭಟನೆಯ ಸಮಯದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬ ರೈತರ ಕುಟುಂಬಗಳನ್ನು ಭೇಟಿ ಮಾಡುವುದು ಮತ್ತು ಅಗತ್ಯವಿರುವ ಎಲ್ಲ ಅಂಶಗಳಲ್ಲೂ ಸಹಾಯ ಮಾಡುವುದು ನಮ್ಮ ಉದ್ದೇಶ ಎಂದು ವಿಶ್ವವಿದ್ಯಾಲಯದ ಹಿರಿಯ ಮಣ್ಣು ವಿಜ್ಞಾನಿ ಮತ್ತು ಆತಮ್ ಪರ್ಗಾಸ್ ಸಮಾಜ ಕಲ್ಯಾಣ ಮಂಡಳಿ ಮುಖ್ಯಸ್ಥ ಡಾ. ವರಿಂದರ್‌ಪಾಲ್ ಸಿಂಗ್ ಹೇಳಿದರು.
ಪೋರ್ಟಲ್ (https://atampargas.org/home/Supportfarmers) ಎಲ್ಲರಿಗೂ ಮುಕ್ತವಾಗಿದೆ ಮತ್ತು ರೈತರು ಇಲ್ಲಿ ನೋಂದಾಯಿಸಿಕೊಳ್ಳಬಹುದು. “ರೈತ ಬೆಂಬಲ” ಯೋಜನೆಗಾಗಿ ನಮ್ಮೊಂದಿಗೆ ಕೆಲಸ ಮಾಡಲು ಬಯಸುವ ಸ್ವಯಂಸೇವಕರು ಪೋರ್ಟಲ್‌ನಲ್ಲಿ ಸಹ ನೋಂದಾಯಿಸಿಕೊಳ್ಳಬಹುದು. ನಮ್ಮ ಸಂಶೋಧನೆಯ ಪ್ರಕಾರ, ಇಲ್ಲಿಯವರೆಗೆ, 198 ರೈತರು ನಡೆಯುತ್ತಿರುವ ಆಂದೋಲನದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಡಾ. ಸಿಂಗ್‌ ಹೇಳಿದರು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement